

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಶಿಕ್ಷಣವೆಂದರೆ ವ್ಯಕ್ತಿಯಲ್ಲಿರುವ ದೈವಿ ಶಕ್ತಿಯ ಅನಾವರಣ. ಅದನ್ನು ಹೊರತೆಗೆಯುವ ಕೆಲಸ ಪಾಲಕರು, ಶಿಕ್ಷಕರು, ವಿದ್ಯಾಭಿಮಾನಿಗಳಿಂದಾಗಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.
ಬಂಟ್ವಾಳ ತಾಲೂಕಿನ ಬೊಂಡಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಆರ್‌ಪಿಎಲ್ ಸಂಸ್ಥೆಯ ಸಿಎಸ್‌ಆರ್ ಅನುದಾನ ಮತ್ತು ಶಾಲಾಭಿವೃದ್ಧಿ ಸಮಿತಿ, ವಿವೇಕಾನಂದ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಇತರ ಸಂಘ ಸಂಸ್ಥೆ ದಾನಿಗಳ ಅನುದಾನದ ನೆರವಿನಿಂದ ನಿರ್ಮಿಸಿದ ತರಗತಿ ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು.
ಒಟ್ಟು ಮೂರು ತರಗತಿ ಕೊಠಡಿಗಳು ನಿರ್ಮಾಣವಾಗಿದ್ದು ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನೈಾಕ್, ಎಂಆರ್‌ಪಿಎಲ್‌ನ ಪ್ರದೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಎಂ.ಜಿ. ಉದ್ಘಾಟಿಸಿ ಶಾಲೆಗೆ ಹಸ್ತಾಂತರಿಸಿದರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನಾಮಫಲಕಗಳನ್ನು ಅನಾವರಣ ಮಾಡಿದರು. ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ 1979ರಲ್ಲಿ ಬೊಂಡಾಲ ಸರ್ಕಾರಿ ಶಾಲೆ ಸ್ಥಾಪನೆಗೆ ಶ್ರಮಿಸಿದವರನ್ನು ಗೌರವಿಸಲಾಯಿತು. ಕಟ್ಟಡ ನಿರ್ಮಿಸಿದ ಗುತ್ತಿಗೆದಾರ ಗೋಪಾಲ್ ನೆಲ್ಲಿ ಹಾಗೂ ಎಂಆರ್‌ಪಿಎಲ್‌ನ ಪ್ರದೀಪ್ ಅವರನ್ನು ಸನ್ಮಾನಿಸಲಾಯಿತು. ವಿಶೇಷವಾಗಿ ಸಹಕರಿಸಿದ ಪದ್ಮನಾಭ ಕೊಟ್ಟಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜನಾರ್ದನ ಕುಲಾಲ್, ವಿವೇಕಾನಂದ ಹಿರಿಯ ವಿದ್ಯಾರ್ಥಿ ಸಂಘ ಅಧ್ಯಕ್ಷ ಬೊಂಡಾಲ ವಿನೋದ್ ಶೆಟ್ಟಿ, ಮುಖ್ಯ ಶಿಕ್ಷಕಿ ರೇಖಾ ಸಿ.ಎಚ್. ಹಾಗೂ ಶಿಕ್ಷಕಿಯರನ್ನು, ಅಡುಗೆ ಸಿಬ್ಬಂದಿ, ನೃತ್ಯ ಶಿಕ್ಷಕ ಶ್ರೀಕಾಂತ್ ಕೊಂಡಣ, ಶಾಲೆಯಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸಿದ ಶಿಕ್ಷಕರನ್ನು ಗೌರವಿಸಲಾಯಿತು.
ಬಂಟ್ವಾಳ ಪುರಸಭೆ ಅಧ್ಯಕ್ಷ ವಾಸು ಪೂಜಾರಿ, ಬಂಟ್ವಾಳ ಸಮೂಹ ಸಂಪನ್ಮೂಲ ಕೇಂದ್ರ ಸಮನ್ವಯ ಅಧಿಕಾರಿ ವಿದ್ಯಾಕುಮಾರಿ, ಬಂಟ್ವಾಳ ನಗರ ಕ್ಲಸ್ಟರ್ ಸಿಆರ್‌ಪಿ ಸುಧಾಕರ್, ಪುರಸಭೆ ಸದಸ್ಯ ಜಯರಾಮ ಗುಂಡೂರ್, ಸತೀಶ್ ಶೆಟ್ಟಿ ಬೊಂಡಾಲ, ಶಾಲಾ ನಾಯಕ ಹರಿಪ್ರಸಾದ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ರೇಖಾ ಸಿ.ಎಚ್. ಸ್ವಾಗತಿಸಿದರು. ಶಿಕ್ಷಕಿ ಭವ್ಯ ವಂದಿಸಿದರು. ಲಾವಣ್ಯ ಹಾಗೂ ಸೌಮ್ಯಾ ಕಾರ್ಯಕ್ರಮ ನಿರೂಪಿಸಿದರು. ಕಿಶೋರಿ ಹಾಗೂ ಭವ್ಯಾ ಸಹಕರಿಸಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಮೂರು ನಾಲ್ಕು ಗ್ರಾಮ ಒಟ್ಟು ಸೇರಿಸಿ ಒಂದು ಮಾದರಿ ಶಾಲೆ ನಿರ್ಮಾಣವಾಗುವ ಅಗತ್ಯವಿದ್ದು, ಈ ಮೂಲಕ ಉತ್ತಮ ಶಿಕ್ಷಣ ನೀಡಲು ಸಾಧ್ಯ. ಈ ಬಗ್ಗೆ ರಾಜ್ಯದ ಶಿಕ್ಷಣ ಮಂತ್ರಿಗೂ ಮನವರಿಕೆ ಮಾಡಲಾಗುವುದು. ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಸದ