

ಹುಬ್ಬಳ್ಳಿ: ಮಯೂರ ನೃತ್ಯ ಅಕಾಡೆಮಿ ನೇತೃತ್ವದಲ್ಲಿ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಕು. ರಮ್ಯಾ ದ್ಯಾವಣ್ಣವರ ಮತ್ತು ಕು. ಶ್ರಾವಣಿ ವಿಶ್ವಕರ್ಮ ಅವರ ರಂಗ ಪ್ರವೇಶ ಕಾರ್ಯಕ್ರಮವನ್ನು ಶನಿವಾರ ಏರ್ಪಡಿಸಲಾಗಿತ್ತು.
ಗೋ4 ವಲ್ಡ್‌ಟೂರ್ ಕಾರ್ಯಾಚರಣೆಗಳ ಮುಖ್ಯಸ್ಥ ಮೌನೇಶ್ವರ ನರಗುಂದ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ನಮ್ಮ ದೇಶವು ಶ್ರೀಮಂತ ಕಲೆ, ಸಂಸ್ಕೃತಿಯನ್ನು ಹೊಂದಿದೆ. ಮುಂದಿನ ಪೀಳಿಗೆಯು ಇದನ್ನು ಬೆಳೆಸಿ, ಉಳಿಸಿಕೊಂಡು ಹೋಗಬೇಕು. ವ್ಯಕ್ತಿತ್ವ ವಿಕಸನಕ್ಕೆ ಶಾಸ್ತ್ರೀಯ ಕಲೆ ಅತ್ಯಗತ್ಯ ಎಂದರು.
ಸಾಮಾಜಿಕ ಕಾರ್ಯಕರ್ತ ಜಯತೀರ್ಥ ಕಟ್ಟಿ ಮಾತನಾಡಿ, ಸಾಮಾಜಿಕ ಸುಧಾರಣೆಗೆ, ಸುವಿಚಾರಗಳನ್ನು ಬೆಳೆಸುವ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಭರತ ನಾಟ್ಯ ಹೊಂದಿದೆ ಎಂದರು.
ಬಾಲ ವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷ ಶಂಕರ ಹಲಗತ್ತಿ ಮಾತನಾಡಿ, ಮಕಳಲ್ಲಿ ಗುರು-ಶಿಷ್ಯ ಪರಂಪರೆ ಬೆಳೆಸಬೇಕು. ಜೀವನದಲ್ಲಿ ಶಿಸ್ತು, ಆತ್ಮ ವಿಶ್ವಾಸ ಮೂಡಿಸಬೇಕು. ಇದಕ್ಕೆ ತಳಪಾಯವೇ ಆಧ್ಯಾತ್ಮಿಕ ಕಲೆ ಎಂದರು.
ಮಯೂರ ನೃತ್ಯ ಅಕಾಡೆಮಿಯ ಮುಖ್ಯಸ್ಥೆ ವಿದುಷಿ ಹೇಮಾ ವಾಘಮೋಡೆ, ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮಾ, ವಿದ್ವಾನ್ ಪಂಚಮ ಉಪಾಧ್ಯಾಯ, ವಿದ್ವಾನ್ ರಘು ಸಿಂಹ ಎ.ಎನ್., ವಿದ್ವಾನ್ ಡಿ. ಅರುಣ ಕುಮಾರ್ ಅವರು ಗೆಜ್ಜೆ ಪೂಜೆ ಹಾಡಿಗೆ ವಾದ್ಯ ಸಂಯೋಜಿಸಿದರು.
ಉಮೇಶ ದ್ಯಾವಣ್ಣವರ, ಜಯಶ್ರೀ ದ್ಯಾವಣ್ಣವರ, ವಾಸುದೇವಾಚಾರ್ ಕೆ.ಬಿ., ಸಂಗೀತಾ ವಾಸುದೇವಾಚಾರ್, ಇತರರು ಆಗಮಿಸಿದ್ದರು.