ವರ್ಗ ಪ್ರತಿನಿಧಿಗಳ ಆಯ್ಕೆ

8Ckd2
Published on

ಚಿಕ್ಕೋಡಿ: ಸಿಟಿಇ ಸಂಸ್ಥೆಯ ಆರ್.ಡಿ.ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಮೊಬೈಲ್ ಆ್ಯಪ್ ಬಳಸಿ ವರ್ಗ ಪ್ರತಿನಿಧಿಗಳ ಆಯ್ಕೆ ಮಾಡಲಾಯಿತು.

ಚುನಾವಣೆಯಲ್ಲಿ ವಿವೇಕ ಕಾಂಬಳೆ, ಪ್ರವೀಣ ಕೋಟಗಿ, ಶ್ರೀಶೈಲ ಪಾಟೀಲ, ರಜತ ಅವಾಡ, ದತ್ತರಾಜ ಕುಲಕರ್ಣಿ,ಸುಮಿತ್ರಾ ಕಿವಡ, ರೂಪಾ ವೀರವ್ವಗೋಳ, ಸುಪ್ರಿಯಾ ಪವಾರ, ಶಿವಕ್ಕ ಕಮತೆ, ಐಶ್ವರ್ಯ ಗುರವ ಪ್ರತಿನಿಧಿಯಾಗಿ ಆಯ್ಕೆಯಾದರು. ಬಳಿಕ ಪ್ರಮಾಣ ಪತ್ರ ವಿತರಿಸಲಾಯಿತು.

ಕಾಲೇಜು ಇಎಲ್‌ಸಿ ಸಂಯೋಜಕ ಪಿ.ಆರ್.ಮನಗೂಳಿ ಚುನಾವಣೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ನೀಡಿದರು. ಲಕ್ಷ್ಮೀ ತೋಟಗಿ, ಸಾಗರ ಕವಟಗಿಮಠ, ದೀಪಕ ವಂಜೇರಿ, ಎ.ಎಲ್. ಮಾನೆ ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು ಎಂದು ಪ್ರಾಚಾರ್ಯ ಉತ್ತಮ ಶಿಂಧೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net