ತರಗತಿ ಆರಂಭಿಸಲು ಮನವಿ

12-dsbr-hdl--03
ಹೂವಿನಹಡಗಲಿಯ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಸಂಘಟನೆಯಿಂದ ತರಗತಿಗಳನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಕಾಲೇಜಿನ ಮುಂಭಾದಲ್ಲಿ ಪ್ರತಿಭಟನೆ ನಡೆಸಿ ಪ್ರಾಚಾರ್ಯ ನಾಗರಾಜ ಪಾಟೀಲರಗೆ ಮನವಿ ಪತ್ರ ಸಲ್ಲಿಸಿದರು. ಎಬಿವಿಪಿ ಜಿಲ್ಲಾ ಸಹಸಂಚಾಲಕ ಕೊಟ್ರೇಶ್ ಕಲ್ಕೇರಿ, ಕಾರ್ಯಕರ್ತರಾದ ರವಿ ಬಿರಬ್ಬಿ, ಧನುಷ್ ಕುದುರಿ ಇತರರಿದ್ದರು.
Published on

ಹೂವಿನಹಡಗಲಿ: ಪಟ್ಟಣದ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಸಂಘಟನೆಯಿಂದ ತರಗತಿಗಳನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಕಾಲೇಜಿನ ಮುಂಭಾದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಪ್ರಾಚಾರ್ಯ ನಾಗರಾಜ ಪಾಟೀಲರಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ವಿದ್ಯಾರ್ಥಿಗಳು ಮಾತನಾಡಿ, ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ 14ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಈಗಾಗಿ ತರಗತಿಗಳೆ ನಡೆದಿಲ್ಲ, ಕನಸು ಹೋತ್ತು ದೂರದ ಊರುಗಳಿಂದ ಬಂದು ಅಧ್ಯಯನ ಮಾಡುವ ನಮಗೆ ತೊಂದರೆಯಾಗುತ್ತಿದೆ. ಪರೀಕ್ಷೆಗಳು ಹತ್ತಿರ ಬರುತ್ತಿವೆ. ತರಗತಿಯನ್ನು ಕೇಳದೆ ಹೇಗೆ ಪರೀಕ್ಷೆ ಎದುರಿಸಬೇಕು. ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಿ ತರಗತಿಗಳನ್ನು ಪ್ರಾರಂಭಿಸಲು ಸೂಚನೆ ನೀಡಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀರ್ವವಾದ ಪ್ರತಿಭಟನೆಯನ್ನು ನಡೆಸುತ್ತೇವೆ ಎಂದರು.

ಎಬಿವಿಪಿ ಜಿಲ್ಲಾ ಸಹಸಂಚಾಲಕ ಕೊಟ್ರೇಶ್ ಕಲ್ಕೇರಿ, ಕಾರ್ಯಕರ್ತರಾದ, ಶಾಂತಾರಜ್, ಪಣಿ, ಮನೋಜ್, ರಾಕೇಶ್ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net