12ರಂದು ತರಗತಿ ಬಹಿಷ್ಕಾರ

Kids-boycotting-classes-as-parents-mark-virtual-bandh-1601455112
Published on

ತೀರ್ಥಹಳ್ಳಿ: ತಾಲೂಕಿನ ಹೊಸೂರು ಗುಡ್ಡೇಕೇರಿ ಸರ್ಕಾರಿ ಪ್ರೌಢಶಾಲೆಯ ನಿವೇಶನ ಒತ್ತುವರಿಯಾಗುತ್ತಿದ್ದು ಈ ಬಗ್ಗೆ ಜಿಲ್ಲಾಽಕಾರಿ ಸೇರಿದಂತೆ ಕಂದಾಯ ಇಲಾಖೆ ಅಽಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ -ೆ.೧೨ರಂದು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟಿಸುವುದಾಗಿ ಶಾಲಾಭಿವೃದ್ಧಿ ಸಮಿತಿ ಎಚ್ಚರಿಸಿದೆ.
ಆಗುಂಬೆ ಗ್ರಾಪಂ ವ್ಯಾಪ್ತಿಯ ಹೊಸೂರು ಗ್ರಾಮದ ಸರ್ವೇ ನಂ.೨೫೮ ಮತ್ತು ೨೫೯ರಲ್ಲಿರುವ ಶಾಲೆಯ ನಿವೇಶನದ ಸಾರ್ವಜನಿಕ ಒತ್ತುವರಿ, ಶಾಲಾ ಜಮೀನಿನ ಸರ್ವೇ ಹದ್ದುಬಸ್ತು ಹಾಗೂ ಪಹಣಿಗೆ ಸಂಬAಽಸಿ ಜಿಲ್ಲಾಽಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ತಹಸೀಲ್ದಾರ್ ಅವರನ್ನು ಖುದ್ದು ಭೇಟಿ ಮಾಡಿ ಈ ಕುರಿತು ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. -É.೧೦ರೊಳಗೆ ಅಽಕಾರಿಗಳು ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ವಿದ್ಯಾರ್ಥಿಗಳು, ಪಾಲಕರು, ಶಾಲಾಭಿವೃದ್ಧಿ ಸಮಿತಿ, ಗ್ರಾಮಸ್ಥರ ನೆರವಿನಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದಾಗಿ ಸಮಿತಿ ಅಧ್ಯಕ್ಷ ಎಂ.ಜಿ. ಸುರೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net