ಕಾರ್ಮಿಕರನ್ನು ಬೆದರಿಸಲು ಮಾಲೀಕ ಹಾರಿಸಿದ ಗುಂಡು ತಾಗಿ ಮಗನಿಗೆ ಗಾಯ

CRIME
Published on

ಮಂಗಳೂರು: ನಗರದ ಮೋರ್ಗನ್ಸ್ ಗೇಟ್ ಬಳಿ ಮಂಗಳವಾರ ವೈಷ್ಣವಿ ಕಾರ್ಗೋದ ಮಾಲೀಕ ಹಾಗೂ ಕಾರ್ಮಿಕರ ನಡುವೆ ಜಟಾಪಟಿ ನಡೆದಿದ್ದು ಈ ವೇಳೆ ಮಾಲೀಕ ಹಾರಿಸಿದ ಗುಂಡಿನಿಂದ ಆತನ ಮಗನೇ ಗಾಯಗೊಂಡ ಘಟನೆ ನಡೆದಿದೆ.

ವೈಷ್ಣವಿ ಕಾರ್ಗೊ ಸಂಸ್ಥೆಯ ಮಾಲೀಕ ರಾಜೇಶ್ ಪ್ರಭು ಎಂಬುವರಲ್ಲಿ ಅವರ ಸಂಸ್ಥೆಯ ಕಾರ್ಮಿಕರು ಸಂಬಳದ ವಿಚಾರದಲ್ಲಿ ತಗಾದೆ ತೆಗೆದಿರುವುದು ಜಟಾಪಟಿಗೆ ಕಾರಣವಾಗಿದೆ. ಇದರಿಂದ ಕೋಪೋದ್ರಿಕ್ತರಾದ ಪ್ರಭು ತಮ್ಮ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದು, ಅದು ಗುರಿ ತಪ್ಪಿ ಅಲ್ಲಿದ್ದ ಅವರ ಮಗ ಸುಧೀಂದ್ರ ಎಂಬ ಬಾಲಕನಿಗೆ ತಗಲಿದೆ. ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net