

ಇಳಕಲ್ಲ(ಗ್ರಾ): ನಗರಸಭೆಯ 19 ನೇ ವಾರ್ಡಿನ ಉಪಚುನಾವಣೆ ನಾಮಪತ್ರ ಪರಿಶೀಲನೆ ವೇಳೆ ನಗರಸಭೆ ಮುಂದೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಂಗಳವಾರ ಮಾತಿನ ಚಕಮಕಿ ನಡೆಯಿತು.
ಏತನ್ಮಧ್ಯೆ ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷದ ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕಾರ ಆಗಿವೆ ಎಂದು ಚುನಾವಣಾ ಅಧಿಕಾರಿ ಸಂಗಪ್ಪ ಬೇನಾಳ ಪ್ರಕಟಿಸಿ ಕಚೇರಿಯಿಂದ ಹೊರ ಹೋಗುವ ವೇಳೆಯಲ್ಲಿ ಅವರ ವಾಹನವನ್ನು ಬಿಜೆಪಿ ಕಾರ್ಯಕರ್ತರು ತಡೆಯುವ ಯತ್ನ ನಡೆಸಿದರು.
ಪಿಎಸ್‌ಐ ಎಸ್.ಆರ್.ನಾಯಕ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದೌಡಾಯಿಸಿ ಚುನಾವಣಾ ಅಧಿಕಾರಿಯನ್ನು ಕಳಿಸಿಕೊಟ್ಟರು. ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಗದ್ದಲ ನಡೆಯಲು ಕಾರಣ ಏನು ಎನ್ನುವುದು ತಿಳಿಯಲಿಲ್ಲ.