ಕೇಂದ್ರ ಕಾರಾಗೃಹದಲ್ಲಿ ರೌಡಿಗಳ ಹೊಡೆದಾಟ

Jail Dwd (2)
Published on

ಧಾರವಾಡ: ನಗರದ ಕೇಂದ್ರ ಕಾರಾಗೃಹದಲ್ಲಿ ರೌಡಿಗಳು ಶನಿವಾರ ಮತ್ತೆ ಮಾರಾಮಾರಿ ನಡೆದಿದೆ. ಉಡುಪಿಯಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೀವಾವಽ ಶಿಕ್ಷೆಗೆ ಒಳಗಾಗಿರುವ ಪಚ್ಚಿ ಎಂಬಾತ, ಸುಲೇಮಾನ್ ಎಂಬುವನ ಮೇಲೆ ಹಲ್ಲೆ ಮಾಡಿದ್ದಾನೆ. ಇವರಿಬ್ಬರ ಮಧ್ಯೆ ಈ ಹಿಂದೆಯೂ ಜೈಲಿನಲ್ಲಿ ಜಗಳ ನಡೆದಿತ್ತು. ಅಲ್ಲದೆ, ಪಚ್ಚಿ ಕೆಲ ತಿಂಗಳ ಹಿಂದೆ ಜೈಲು ಸಿಬ್ಬಂದಿಯ ಮೇಲೂ ಹಲ್ಲೆಗೆ ಯತ್ನಿಸಿದ್ದ. ಶನಿವಾರ ಇಬ್ಬರ ಮಧ್ಯೆ ಜಗಳ ನಡೆದು ಟೈಲ್ಸ್ನಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಸುಲೇಮಾನ್‌ನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net