ಹರೇಕಳದಲ್ಲಿ ಮಾತಿನ ಚಕಮಕಿ, ಹಲ್ಲೆ

Gramayana Election Logo_2020
Published on

ಉಳ್ಳಾಲ: ಹರೇಕಳ ಗ್ರಾಮದ ನಾಲ್ಕನೇ ವಾರ್ಡನಲ್ಲಿ ಮತ ಚಲಾಯಿಸುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಬೆಂಬಲಿತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ಸಂದರ್ಭ ಎಸ್‌ಡಿಪಿಐ ಬೆಂಬಲಿತ ನೂಮಾನ್ ಎಂಬಾತ ಕಾಂಗ್ರೆಸ್ ಮುಖಂಡ ಝಕರಿಯಾ ಮಲಾರ್ ಮೇಲೆ ಹಲ್ಲೆ ನಡೆಸಿದ್ದಾರೆ.

ಘಟನೆ ಸಂದರ್ಭದಲ್ಲಿ ಎರಡೂ ಪಕ್ಷದ ಬೆಂಬಲಿತರು ಸ್ಥಳದಲ್ಲಿ ಜಮಾಯಿಸಿದ್ದು ಇನ್ನಷ್ಟು ಅನಾಹುತ ಆಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಿದರು. ಬೋಳಿಯಾರ್ ಗ್ರಾಮದಲ್ಲೂ ಸೋಮವಾರ ರಾತ್ರಿ ಎಸ್‌ಡಿಪಿಐ ಮತ್ತು ಕಾಂಗ್ರೆಸ್ ಬೆಂಬಲಿತರ ನಡುವೆ ಮಾತಿನ ಚಕಮಕಿ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net