ಎರಡು ಗುಂಪುಗಳ ನಡುವೆ ಘರ್ಷಣೆ

Clash between two groups
ಇಳಕಲ್ಲ ನಗರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಭದ್ರತೆಗಾಗಿ ಸ್ಥಳದಲ್ಲಿ ಪೊಲೀಸ್ ವಾಹನ ನಿಂತಿರುವುದು.
Published on

ಇಳಕಲ್ಲ(ಗ್ರಾ) : ಯಾವುದೋ ವಿಷಯವಾಗಿ ಎರಡು ಗುಂಪುಗಳ ನಡುವೆ ಗದ್ದಲ ನಡೆದು ಪರಸ್ಪರ ದೂರು ದಾಖಲಾಗಿವೆ.

ನಗರದ ವಿಜಯ ಮಹಾಂತೇಶ ಗದ್ದುಗೆಗೆ ಹೋಗುವ ಮಾರ್ಗದಲ್ಲಿ ಬಸವರಾಜ ಮತ್ತು ನಾಗರಾಜ ಎಂಬ ವ್ಯಕ್ತಿಗಳ ಮೇಲೆ ಹರಿತವಾದ ಆಯುಧಗಳಿಂದ ಸೋಮವಾರ ಹಲ್ಲೆ ಮಾಡಲಾಗಿದೆ ಎಂಬ ವಿಷಯ ತಿಳಿದು ಬಂದಾಗ ಪೋಲಿಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ.

ಗಾಯಾಳುಗಳನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಉಪಚಾರ ನೀಡಲಾದರೂ ನಂತರ ಅವರನ್ನು ಬಾಗಲಕೋಟೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಪ್ರಕರಣದಲ್ಲಿ ಭಾಗಿಯಾಗಿರುವ ಶ್ರೀನಿವಾಸ ಎಂಬುವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪರಸ್ಪರ ದೂರು ದಾಖಲಾದರೂ ಇದುವರೆಗೆ ಯಾರನ್ನೂ ಬಂಧಿಸಿಲ್ಲ.

ಡಿವೈಎಸ್‌ಪಿ ಗಿರೀಶ, ಸಿಪಿಐ ಸುರೇಶ ಅವರು ಘಟನೆ ನಡೆದ ಸ್ಥಳ ಮತ್ತು ಕಂಠಿ ಸರ್ಕಲ್‌ನಲ್ಲಿ ಪೊಲೀಸರನ್ನು ನಿಯೋಜಿಸಿ ಅಹಿತಕರ ಘಟನೆಗಳು ಮುಂದುವರಿಯದಂತೆ ಕ್ರಮ ಕೈಗೊಂಡಿದ್ದಾರೆ.

ಶಹರ ಠಾಣೆ ಪಿಎಸ್‌ಐ ಕೃಷ್ಣವೇಣಿ ಗುರ್ಲಹೊಸೂರ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net