ಮೃತ ವ್ಯಕ್ತಿಯ ಗುರುತು ಪತ್ತೆ

Published on

ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಹ್ಯಾಂಡ್ ಪೋಸ್ಟ್‌ನಲ್ಲಿ ಶನಿವಾರ ಶಿಫ್ಟ್ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ದೊರೆತಿದ್ದ ವ್ಯಕ್ತಿ ಬೆಂಗಳೂರಿನ ಮಾಗಡಿ ರಸ್ತೆಯ ನಿವಾಸಿ ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.

ಮೋಹನ್ ಅಲಿಯಾಸ್ ಓಲೆ ರಘು (43) ಮೃತ ವ್ಯಕ್ತಿ ಗುರುತಿಸಲಾಗಿದೆ. ಶವ ದೊರೆತ ಬಳಿಕ ಪೊಲೀಸರು ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಶವಗಾರದಲ್ಲಿ ಮೃತ ದೇಹ ಇಟ್ಟಿದ್ದರು. ಭಾನುವಾರ ಮೃತನ ಪತ್ನಿ ಪುಷ್ಪ್ಪಲತಾ, ತಾಯಿ ಲಕ್ಷ್ಮೀ ಹಾಗೂ ತಮ್ಮ ಮಂಜುನಾಥ್ ಶವವನ್ನು ವೀಕ್ಷಿಸಿ ಗುರುತುಹಿಡಿದಿದ್ದಾರೆ.

ಮೃತ ಓಲೆ ರಘು ಬಡ್ಡಿ ವ್ಯವಹಾರ ಮಾಡಿಕೊಂಡಿದ್ದ. ಅವನ ಸ್ನೇಹಿತರ ಜತೆ ಆಗಾಗ್ಗೆ ಹೊರಗಡೆ ಹೋಗಿ ಪಾರ್ಟಿ ಮಾಡುವ ಚಟ ಹೊಂದಿದ್ದ. ನಾಲ್ಕೈದು ದಿನವಾದರೂ ಮನೆಗೆ ಹಿಂದಿರುಗುತ್ತಿರಲಿಲ್ಲ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸಾವಿಗೆ ಕಾರಣ ಏನೆಂದು ತಿಳಿದುಬರಲಿದೆ. ಸದ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅನುಮಾನಸ್ಪಾದ ಸಾವು ಎಂದು ಪ್ರಕರಣ ದಾಖಲಾಗಿದೆ. ಶವಪರೀಕ್ಷೆಯ ನಂತರ ಮೃತದೇಹವನ್ನು ವಾರಸದಾರರಿಗೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net