

ಹುಬ್ಬಳ್ಳಿ: ಸಿ. ಕೃಷ್ಣಯ್ಯ ಚೆಟ್ಟಿ ಗ್ರುಪ್ ಆಪ್ ಜುವೇಲರ್ಸ್ ವತಿಯಿಂದ ಆಯೋಜಿಸಿರುವ 4 ದಿನಗಳ ವಿಶೇಷ ಆಭರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ನಗರದ ಡೆನಿಸನ್ಸ್ ಹೋಟೆಲ್ನಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಉದ್ಘಾಟಿಸಿದ ಶಾಸಕ ಮಹೇಶ ಟೆಂಗಿನಕಾಯಿ, ಒಂದೇ ಸೂರಿನಡಿ ಚಿನ್ನ, ಬೆಳ್ಳಿ ಹಾಗೂ ವಜ್ರದ ಆಭರಣಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಿರುವುದು ಇಲ್ಲಿಯ ವಿಶೇಷ. 150 ವರ್ಷಗಳ ಇತಿಹಾಸವುಳ್ಳ, ರಾಜ ಮನೆತನದವರಿಗೆ ಆಭರಣಗಳ ವ್ಯಾಪಾರಿಯಾಗಿದ್ದ ಸಿ. ಕೃಷ್ಣಯ್ಯ ಚೆಟ್ಟಿ ಗ್ರುಪ್ ನಂಬಿಕೆಗೆ ಹೆಸರಾಗಿದೆ. ಅಸಾಧಾರಣ ಕರಕುಶಲತೆ ಮತ್ತು ವಿಶೇಷ ವಿನ್ಯಾಸದ ಆಭರಣಗಳ ಸಂಗ್ರಹವಿದ್ದು ಹಬ್ಬದ ಸಂದರ್ಭದಲ್ಲಿ ಜನರನ್ನು ಆಕರ್ಷಿಸಲಿದೆ ಎಂದು ಹೇಳಿದರು.
ಸಿ. ಕೃಷ್ಣಯ್ಯ ಚೆಟ್ಟಿ ಗ್ರುಪ್ ಆಪ್ ಜುವೇಲರ್ಸ್ನ ಅಸಿಸ್ಟಂಟ್ ಸ್ಟೋರ್ ಹೆಡ್ ಶ್ರೀಚರಣ ಮಾತನಾಡಿ, ಈ ಪ್ರದರ್ಶನದಲ್ಲಿ ಸಾಂಪ್ರದಾಯಿಕ ಮತ್ತು ಸಮಕಾಲೀನ ಆಭರಣಗಳು ಆಕರ್ಷಕ ವಿನ್ಯಾಸ ಮತ್ತು ವಿಶೇಷ ಶ್ರೇಣಿಯಲ್ಲಿ ಲಭ್ಯವಿದೆ. 10-12 ಗ್ರಾಮ್ಂದ 100 ಗ್ರಾಮ್ ಮೇಲ್ಪಟ್ಟು ಚಿನ್ನದ ಆಭರಣಗಳಿವೆ. ಈ ಪ್ರದರ್ಶನದಲ್ಲಿ ಹುಬ್ಬಳ್ಳಿ ಗ್ರಾಹಕರಿಗೆ ಹಬ್ಬದ ವಿಶೇಷವಾಗಿ 1 ಕ್ಯಾರೆಟ್ ವಜ್ರದ ಆಭರಣಗಳ ಖರೀದಿ ಮೇಲೆ 2ಗ್ರಾಮ್ ಚಿನ್ನದ ನಾಣ್ಯ ಮತ್ತು 1ಗ್ರಾಮ್ ಚಿನ್ನ ಖರೀದಿಗೆ 3 ಗ್ರಾಮ್ ಬೆಳ್ಳಿ ನಾಣ್ಯ ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ನಿಶಾಂತ ಪೂಜಾರ, ತೇಜಸ್ ಕಾಲ್ರಾ, ಚೈತನ್ಯಾ, ಸಂಜಿತಾ, ಮಂಜುನಾಥ, ಇತರರು ಇದ್ದರು.