ನಾಗರಿಕತೆಗೆ ಔಪಚಾರಿಕ, ಸಾಮಾಜಿಕ ಶಿಕ್ಷಣ ಅಗತ್ಯ

2, srinivaspur photo -2
Published on

ಶ್ರೀನಿವಾಸಪುರ: ಅಕ್ಷರ ಅರಿವಿನ ಹೆಬ್ಬಾಗಿಲು, ಶಿಕ್ಷಣ ಜ್ಞಾನದ ಸಂಕೇತ, ನಾಗರಿಕತೆಗೆ ಔಪಚಾರಿಕ ಶಿಕ್ಷಣ ಹಾಗೂ ಸಾಮಾಜಿಕ ಶಿಕ್ಷಣ ಎರಡೂ ಅತ್ಯಗತ್ಯ ಎಂದು ಎಸ್​ಡಿಎಂಸಿ ಅಧ್ಯಕ್ಷೆ ಸ್ವಾತಿ ತಿಳಿಸಿದರು.

ತಾಲೂಕಿನ ಆವುಲಕುಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶನಿವಾರ ಉಚಿತ ಬಟ್ಟೆ, ಟೈ, ಸಾಕ್ಸ್​, ಬೆಲ್ಟ್​, ಲೇಖನಿ ಸಾಮಾಗ್ರಿ ವಿತರಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಪ್ರಸಕ್ತ ವಿದ್ಯಾಮಾನಗಳು ಜ್ಞಾನ ಅತ್ಯವಶ್ಯಕ. ಇಂತಹ ಜ್ಞಾನ ವೃದ್ಧಿಗೊಳಿಸಲು ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ವಹಿಸಿಕೊಳ್ಳಬೇಕಿದೆ ಎಂದರು.

ನಮ್ಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ದಾನಿಗಳು ವಿತರಿಸುವ ಲೇಖನಿ ಸಾಮಗ್ರಿಗಳನ್ನು ಶೈಕ್ಷಣಿಕ ಪ್ರಗತಿಗಾಗಿ ಬಳಿಸಿಕೊಂಡು ಉತ್ತಮ, ಸಂಸ್ಕಾರಯುತ ಶಿಕ್ಷಣ ಪಡೆದು ಪಾಲಕರಿಗೆ ಹಾಗೂ ಶಾಲೆಗೆ ಒಳ್ಳೇಯ ಕೀರ್ತಿ ತರುವಂತೆ ಸಲಹೆ ನೀಡಿದರು.

ಮುಖ್ಯಶಿಕ್ಷಕ ಕಲಾಶಂಕರ್​ ಮಾತನಾಡಿ ದೇಹಕ್ಕೆ ಉಸಿರು ಎಷ್ಟು ಮುಖ್ಯವೋ, ಶಿಕ್ಷಣ ಅಷ್ಟೇ ಮುಖ್ಯ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಗುರು&ಹಿರಿಯರ ಮಾರ್ಗದರ್ಶನ ಪಡೆದು ವಿದ್ಯಾವಂತರಾಗುವಂತೆ ತಿಳಿಸಿದರು.

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಉಳಿಯ ಬೇಕಾದರೆ ಗ್ರಾಮದಲ್ಲಿನ ವಿದ್ಯಾವಂತ ಯುವಕರು ಹಾಗೂ ಶಿಕ್ಷಣ ಪ್ರೇಮಿಗಳು ತಮ್ಮಿಂದಾಗುವ ಸಲಹೆ, ಸಹಕಾರಗಳನ್ನು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೀಡಿ, ಗ್ರಾಮದಲ್ಲಿರುವ ಮಕ್ಕಳ ಪಾಲಕರಿಗೆ ಸರ್ಕಾರಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ದಾಖಾಲಿಸುವಂತೆ ಪ್ರೋತ್ಸಾಹಿಸಿದಾಗ ಸರ್ಕಾರಿ ಶಾಲೆ ಉಳಿಯಲು ಸಾಧ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net