50 ಲಕ್ಷ ರೂ.ವರೆಗಿನ ಸಿವಿಲ್ ಕಾಮಗಾರಿ ತಾಲೂಕಿನವರಿಗೆ ಮಾತ್ರ

SDP GUTTIGEDARARA SABHE
Published on

ಸಿದ್ದಾಪುರ: ತಾಲೂಕಿನಲ್ಲಿ ಕರೆಯುವ 50 ಲಕ್ಷ ರೂ.ಗಳ ಒಳಗಿನ ಸಿವಿಲ್ ಕಾಮಗಾರಿಗಳಿಗೆ ತಾಲೂಕಿನ ಗುತ್ತಿಗೆದಾರರು ಮಾತ್ರ ಟೆಂಡರ್​ಗೆ ಭಾಗವಹಿಸಬೇಕು. ಬೇರೆ ತಾಲೂಕು ಅಥವಾ ಜಿಲ್ಲೆಯ ಗುತ್ತಿಗೆದಾರರು ಟೆಂಡರ್ ಹಾಕಬಾರದು ಎನ್ನುವ ಮಹತ್ವದ ನಿರ್ಣಯವನ್ನು ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.

ಪಟ್ಟಣದ ಬಾಲಭವನದಲ್ಲಿ ಸಂಘದ ಅಧ್ಯಕ್ಷ ಸತೀಶ ಗೌಡರ್ ಅಧ್ಯಕ್ಷತೆಯಲ್ಲಿ ಬುಧವಾರ ಏರ್ಪಾಟಾಗಿದ್ದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ತಾಲೂಕಿನಲ್ಲಿ 110 ಜನ ಸಿವಿಲ್ ಗುತ್ತಿಗೆದಾರರೇ ಇದ್ದು, ಅವರೆಲ್ಲ ಕಾಮಗಾರಿ ಇಲ್ಲದೇ ನಿರುದ್ಯೋಗಿಗಳಾಗುತ್ತಾರೆ. ಮತ್ತು ಬೇರೆ ತಾಲೂಕಿನ ಗುತ್ತಿಗೆದಾರರು ಕಡಿಮೆ ಮೊತ್ತದ ಟೆಂಡರ್ ಸಲ್ಲಿಸಿ ಕಾಮಗಾರಿ ಗುಣಮಟ್ಟ ಹಾಳು ಮಾಡುತ್ತಾರೆ. ಈ ಎಲ್ಲ ಕಾರಣಗಳಿಂದ ಬೇರೆ ತಾಲೂಕಿನ ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದಲ್ಲಿ ಪ್ರತಿಭಟನೆ ನಡೆಸಲು ಸರ್ವಾನುಮತದ ನಿರ್ಣಯ ಮಾಡಿದ್ದಾರೆ.

ಕಾರ್ಯದರ್ಶಿ ಎ.ಜಿ. ನಾಯ್ಕ, ಸದಸ್ಯರಾದ ಗಣೇಶ ನಾಯ್ಕ, ಎನ್.ಕೆ. ನಾಯ್ಕ, ಪಿ.ಆರ್. ಹೆಗಡೆ, ಜಿ.ಕೆ. ಮಡಿವಾಳ, ಜಿ.ಜಿ.ನಾಯ್ಕ, ಎಸ್.ಕೆ. ಮೇಸ್ತಾ, ಮಹಾಲಿಂಗಾ, ಬಾಬು ನಾಯ್ಕ, ನಾರಾಯಣ ನಾಯ್ಕ, ಸಂದೀಪ ಶೆಟ್ಟಿ, ಜೈಪ್ರಕಾಶ ನಾಯ್ಕ, ಆರ್.ಎಸ್. ಹೆಗಡೆ, ಜಗದೀಶ ಗೌಡ, ಆನಂದ ನಾಯ್ಕ, ಪಿ.ರಾಮು, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net