ವೈಜ್ಞಾನಿಕ ಸಮೀಕ್ಷೆಗೆ ಮಾಹಿತಿ ಸಂಗ್ರಹ: ಪೌರಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು ಹೇಳಿಕೆ

Civil Service Union press conference Mandya
Published on

ಮಂಡ್ಯ: ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೆ ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ಅವರ ಮಧ್ಯಂತರ ವರದಿ ದತ್ತಾಂಶದ ವೈಜ್ಞಾನಿಕ ಸಮೀಕ್ಷೆ ಹಿನ್ನಲೆ ಏ.26ರವರೆಗೆ ಅಧಿಕಾರಿಗಳು ಮಾಹಿತಿ ಪಡೆಯಲಿದ್ದಾರೆ. ಆದ್ದರಿಂದ ಮಾದಿಗ ಸಮುದಾಯದವರು ಆದಿ ದ್ರಾವಿಡ ಮಾದಿಗ ಎಂದು ಕಡ್ಡಾಯವಾಗಿ ನಮೂದಿಸಬೇಕೆಂದು ಪೌರಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು ಮನವಿ ಮಾಡಿದರು.

ಮಾದಿಗ ಸಮುದಾಯದ ಬಂಧುಗಳು ಶ್ರಮಿಕ, ಸ್ವಚ್ಛತಾ ಕೆಲಸಗಳಲ್ಲಿಯೇ ತೊಡಗಿದ್ದಾರೆ, ಸಮುದಾಯದ ಒಳ ಮೀಸಲಾತಿ ಸಂಬಂಧ ಸಲ್ಲಿಸಿರುವ ವರದಿ ಸರಿಯೆಂದು ಮಾಹಿತಿ ನೀಡಬೇಕಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶ್ರಮಿಕ, ಸ್ವಚ್ಛತಾ ಕೆಲಸಗಳಲ್ಲಿ ತೊಡಗಿರುವ ಆದಿದ್ರಾವಿಡರು ತಪ್ಪದೇ ಆದಿದ್ರಾವಿಡ ಮಾದಿಗ ಎಂದು ನಿಗದಿತ ಅರ್ಜಿ ಕಾಲಂನಲ್ಲಿ ಕಡ್ಡಾಯವಾಗಿ ನಮೂದಿಸುವ ಮೂಲಕ ಒಳ ಮೀಸಲಾತಿ ನಿಶ್ಚಿತತೆ ಪಡಿಸಿ. ಈ ಮೂಲಕ ಮಕ್ಕಳ ಮುಂದಿನ ಭವಿಷ್ಯ, ವಿದ್ಯಾಭ್ಯಾಸ, ಉದ್ಯೋಗ ಇನ್ನಿತರೆ ಸ್ಥಾನಮಾನಗಳಲಿ ಅವಕಾಶ ಪಡೆಯಲು ಕೈಜೋಡಿಸಬೇಕೆಂದು ಕರೆ ನೀಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಆದಿದ್ರಾವಿಡ(ಪೌರಕಾರ್ಮಿಕ) ಯುವಕರ ಅಭಿವೃದ್ಧಿ ಮಹಾಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ್, ಗೌರವ ನಿರ್ದೇಶಕ ಕೆ.ನಂಜಪ್ಪ ಬಸವನಗುಡಿ, ಬ್ಯಾಂಕ್ ರಂಗಣ್ಣ, ಸಿ.ಆರ್.ವಿಜಯ್, ಗಣೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net