

ಹೊನ್ನಾಳಿ: ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನ್ನ ಅವಧಿಯಲ್ಲಿ ಎಲ್ಲರನ್ನು ಖಾಯಂ ಮಾಡಿಸುತ್ತೇನೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಭರವಸೆ ನೀಡಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಶನಿವಾರ ನಡೆದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಸಮಸ್ಯೆ ಬಗ್ಗೆ ನನಗೆ ಅರಿವಿದೆ. ಆರ್ಥಿಕ ಪರಿಸ್ಥಿತಿ ಹೇಗೆ ನಿಭಾಯಿಸುತ್ತಿದ್ದಿರಿ ಎಂಬುದು ಗೊತ್ತಿದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಬೇಕಾದರೆ ಮೊದಲು ನಿಮ ್ಮ ಕುಟುಂಬದ ಸಬಲೀಕರಣ ಆಗಬೇಕಿದೆ ಎಂದು ಹೇಳಿದರು.
ಪ್ರತಿ ಪಟ್ಟಣಕ್ಕೂ ನಿಮ್ಮ ಅವಶ್ಯಕತೆ ಇದೆ. ನೀವು ನಮ್ಮ ಸ್ವಚ್ಛತಾ ರಾಯಭಾರಿಗಳು ಎಂದರೆ ತಪ್ಪಾಗಲಾರದು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಬಾಬು ಹೋಬಳದಾರ್ ಮಾತನಾಡಿ, ಮಳೆ, ಚಳಿ, ಬಿಸಿಲು ಲೆಕ್ಕಿಸದೆ ಬೆಳ್ಳಂಬೆಳಗ್ಗೆ ನಗರವನ್ನು ಸ್ವಚ್ಛ ಮಾಡುವ ನೀವು ಶಿಸ್ತಿನ ಸಿಪಾಯಿ ಇದ್ದಂತೆೆ ಎಂದರು.
ಸದಸ್ಯ ಸುರೇಶ್ ಹೊಸಕೇರಿ, ಧರ್ಮಪ್ಪ, ಪುರಸಭೆ ಮುಖ್ಯಾಧಿಕಾರಿ ನಿರಂಜನಿ, ಪೌರ ಕಾರ್ಮಿಕರ ಅಧ್ಯಕ್ಷ ರವಿಕುಮಾರ್ ಮಾತನಾಡಿದರು.
ಹಿರಿಯ ಪೌರ ಕಾರ್ಮಿಕರಿಗೆ ಹೋಬಳೇಶ್, ಸುಬ್ಬಮ್ಮ, ತಿರುಪತಮ್ಮ, ನಾಗಮ್ಮ, ಗೂರಪ್ಪ, ರಾಜಪ್ಪ, ಶಿವಣ್ಣ ಅವರಿಗೆ ಗೌರವಿಸಲಾಯಿತು.
ಮಾಜಿ ಅಧ್ಯಕ್ಷ ರಂಗನಾಥ್, ದಾವಣಗೆರೆ ನೀರು ಸರಬರಾಜು ಇಲಾಖೆ ಎಇಇ ರವಿಕುಮಾರ್, ಸದಸ್ಯರಾದ ರಾಜೆಂದ್ರ, ಮೈಲಪ್ಪ, ಕಂದಾಯಾಧಿಕಾರಿ ವಸಂತ್, ವಿಜೇಂದ್ರಪ್ಪ, ಸತೀಶ್, ಚಂದ್ರು, ಆರೋಗ್ಯ ನಿರೀಕ್ಷಕ ಪರಮೇಶ್‌ನಾಯ್ಕ, ಇತರರು ಇದ್ದರು.