ಪಾಲಿಕೆ ಆಯುಕ್ತರ ಕಚೇರಿಗೆ ಪೌರಕಾರ್ಮಿಕರ ಮುತ್ತಿಗೆ

h24-muttige
Published on

ಹುಬ್ಬಳ್ಳಿ: ಪಾಲಿಕೆ ಆಯುಕ್ತರ ದಲಿತ ವಿರೋಧಿ ನೀತಿ ಖಂಡಿಸಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಪೌರ ಕಾರ್ಮಿಕರ ಮತ್ತು ನೌಕರರ ಸಂಘದ ನೇತೃತ್ವದಲ್ಲಿ ಪೌರಕಾರ್ಮಿಕರು, ಇಲ್ಲಿಯ ಮಹಾನಗರ ಪಾಲಿಕೆ ಆಯುಕ್ತರ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
7 ದಿನದಿಂದ ಪ್ರತಿಭಟನೆ ನಡೆಯುತ್ತಿದ್ದರೂ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರು ಸ್ಥಳಕ್ಕೆ ಆಗಮಿಸಿ ಪರಿಹಾರ ಸೂಚಿಸುತ್ತಿಲ್ಲ. ನಮ್ಮ ಬೇಡಿಕೆ ಈಡೇರಿಸುವಂತೆ ಅಂಗಲಾಚುತ್ತಿದ್ದರೂ ಕ್ಯಾರೆ ಎನ್ನುತ್ತಿಲ್ಲ. ಮುಷ್ಕರ ಆರಂಭಿಸಿದಂದಿನಿಂದ ಸಾರ್ವಜನಿಕರು, ಪಾಲಿಕೆ ಆಯುಕ್ತರ ವಿಳಂಬ ನೀತಿಯಿಂದ ರೋಸಿ ಹೋಗಿದ್ದಾರೆ. ಯಾಕೆಂದರೆ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ. ಈಗ ಡೆಂಘಿ, ಮಲೇರಿಯಾ ಕಾಯಿಲೆ ಉಲ್ಬಣಿಸುತ್ತಿದೆ. ಪೌರ ಕಾರ್ಮಿಕರ ಬೇಡಿಕೆ ಈಡೇರಿಸಬೇಕೆಂದು ಸಾರ್ವಜನಿಕರೇ ಹೇಳುತ್ತಿದ್ದಾರೆ. ಆದರೂ ಆಯುಕ್ತರ ಸಾರ್ವಜನಿಕರ ಹಿತ ಕಾಪಾಡುತ್ತಿಲ್ಲ ಎಂದು ಪ್ರತಿಭಟನಾ ನಿರತರು ಆರೋಪಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಾತಾವರಣ ತಿಳಿಸಿಗೊಳಿಸಿದರು.
ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ, ಗಂಗಮ್ಮ ಸಿದ್ರಾಮಪುರ, ಗಾಳೆಪ್ಪ ದ್ವಾಸಲಕೇರಿ, ಸೋಮು ಮೊರಬದ, ಶರಣಪ್ಪ ಅಮರಾವತಿ, ಕಿರಣಕುಮಾರ ಸೋಮರಡ್ಡಿ, ನಾಗರಾಜ ದೊಡ್ಡಮನಿ, ತಾಯಪ್ಪ ಬೆಳ್ಳಿಕೊಪ್ಪ, ಕನಕಪ್ಪ ಕೋಟಬಾಗಿ, ಅನಿತಾ ನಗೊಂಡ, ಲಕ್ಷ್ಮಿ ಬೇತಾಪಲ್ಲಿ, ಬೆಂಗಳೂರು ನಗರ ಅಧ್ಯಕ್ಷ ಸುರೇಶ ಬಾಬು, ಹೆಬ್ಬಾಳ ನಾಗರಾಜ, ಆರ್. ದಾಸು, ಯತಿರಾಜು, ಆರ್. ಶಿವಣ್ಣ, ಆರ್ಟಿಸ್ಟ್ ನಾಗರಾಜ, ಬಸವರಾಜ ಆಲಾಪುರ ಹಾಗೂ ಸಿದ್ದಪ್ಪ ಕಂದಳ್ಳಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net