ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ

13 kmp 02
ಕಂಪ್ಲಿ ಪುರಸಭೆ ಸಿಬ್ಬಂದಿಗೆ ಶಾಸಕ ಜೆ.ಎನ್.ಗಣೇಶ್, ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಸಮವಸ್ತ್ರ ವಿತರಿಸಿದರು. ಪ್ರಮುಖರಾದ ಕೆ.ಶ್ರೀನಿವಾಸರಾವ್, ಸಿ.ಆರ್.ಹನುಮಂತ, ಲಡ್ಡು ಹೊನ್ನೂರವಲಿ, ಕೆ.ಮಸ್ತಾನವಲಿ ಇತರರಿದ್ದರು.
Published on

ಕಂಪ್ಲಿ: ಪಟ್ಟಣ ಸ್ವಚ್ಛಗೊಳಿಸಿ ಸುಂದರ ಕಾಪಾಡುವ ಪುರಸಭೆ ಸಿಬ್ಬಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ಇಲ್ಲಿನ ಪುರಸಭೆ ನೀರು ಶುದ್ಧೀಕರಣ ಘಟಕ ಆವರಣದಲ್ಲಿ ಪೌರ ಕಾರ್ಮಿಕರು ಮತ್ತು ಸಿಬ್ಬಂದಿಗೆ ಸಮವಸ್ತ್ರ ವಿತರಿಸುವ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿ, ಪುರಸಭೆ ಸಿಬ್ಬಂದಿ ಶುದ್ಧ ನೀರು ಪೂರೈಕೆ, ಸ್ವಚ್ಛತೆ ಮತ್ತು ನೈರ್ಮಲ್ಯ, ಹಸಿರೀಕರಣಕ್ಕಾಗಿ ಸದಾ ಶ್ರಮಿಸುತ್ತಿದ್ದಾರೆ. ಪಟ್ಟಣದ ಸ್ವಚ್ಛತೆಗೆ ಜನತೆ ಪುರಸಭೆಯ ನಿಯಮಗಳನ್ನು ಪಾಲಿಸಬೇಕು. ಪೌರ ಕಾರ್ಮಿಕರು, ಸಿಬ್ಬಂದಿಗೆ ಕಳೆದ ಹತ್ತು ವರ್ಷಗಳಿಂದಲೂ ಸಮವಸ್ತ್ರ ವಿತರಿಸಲಾಗುತ್ತಿದೆ ಎಂದರು. ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಪ್ರಮುಖರಾದ ಕೆ.ಶ್ರೀನಿವಾಸರಾವ್, ಸಿ.ಆರ್.ಹನುಮಂತ, ಲಡ್ಡು ಹೊನ್ನೂರವಲಿ, ವೀರಾಂಜನೇಯಲು, ಕೆ.ಮಸ್ತಾನ್‌ವಲಿ, ಅಕ್ಕಿ ಜಿಲಾನ್, ಆಟೋ ರಾಘವೇಂದ್ರ, ಜಿ.ಸುಧಾಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net