ಪೌರ ಕಾರ್ಮಿಕರ ಸಿಂಧುತ್ವ ಪ್ರಮಾಣಪತ್ರ ಗೊಂದಲ-ಸಚಿವ ಮಂಕಾಳ ಹೇಳಿದ್ದೇನು..?

Civil Laborer Validity Certificate Confusion
Published on

ಕಾರವಾರ: ಆಂಧ್ರ ಮೂಲದ 19 ಪೌರ ಕಾರ್ಮಿಕರ ಕಾಯಮಾತಿಗೆ ಎಸ್‌ಸಿ ಸಿಂಧುತ್ವ ಪ್ರಮಾಣಪತ್ರ ನೀಡಿ. ಇಲ್ಲವೇ ಅವರಿಗೆ ಉದ್ಯೋಗ ನೀಡಿದ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಸಚಿವ ಮಂಕಾಳ ವೈದ್ಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟು 174 ಪೌರ ಕಾರ್ಮಿಕರನ್ನು ಕಾಯಂ ಮಾಡಲಾಗಿತ್ತು. ಅದರಲ್ಲಿ 19 ಪೌರ ಕಾರ್ಮಿಕರು ಆಂಧ್ರ ಮೂಲದವರಾಗಿದ್ದು, ಅವರಿಗೆ ಎಸ್‌ಸಿ ಸಿಂಧುತ್ವ ಪ್ರಮಾಣಪತ್ರ ನೀಡುವ ಬಗ್ಗೆ ಗೊಂದಲ ಉಂಟಾಗಿ ಇಡೀ ನೇಮಕಾತಿಯನ್ನು ತಡೆ ಹಿಡಿಯಲಾಗಿತ್ತು. ಇನ್ನುಳಿದ 25 ಪೌರ ಕಾರ್ಮಿಕರ ದಾಖಲಾತಿಯಲ್ಲೂ ಗೊಂದಲ ಇದೆ ಎಂಬ ಕಾರಣ ನೀಡಿ ಸಿಂಧುತ್ವ ಪ್ರಮಾಣಪತ್ರ ನೀಡಿಲ್ಲ. ಆದರೆ, ಆ ಎಲ್ಲ ಗೊಂದಲಗಳನ್ನು ನಿವಾರಿಸಿ ಶೀಘ್ರ ಎಲ್ಲರಿಗೆ ಪ್ರಮಾಣಪತ್ರ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಬಗ್ಗೆ ಸಚಿವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಅಜ್ಜಪ್ಪ ಸೊಗಲದ `ಹೊರ ರಾಜ್ಯದಿಂದ ಬಂದ ಎಸ್‌ಸಿ, ಎಸ್‌ಟಿಗಳಿಗೆ ಜಾತಿ ಪ್ರಮಾಣಪತ್ರ ನೀಡಬಹುದು. ಆದರೆ, ಉದ್ಯೋಗ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರದ ನಿಯಮ ಹೇಳುತ್ತದೆ. ಜಿಲ್ಲೆಯ ಪೌರ ಕಾರ್ಮಿಕರಿಗೆ ಸಿಂಧುತ್ವ ಪ್ರಮಾಣ ಪತ್ರ ನೀಡುವ ವಿಚಾರದಲ್ಲಿಯೂ ನಾವು ಸ್ಪಷ್ಟನೆ ಕೋರಿದ್ದೆವು. ಉದ್ಯೋಗದ ವಿಚಾರದಲ್ಲಿ ಸಿಂಧುತ್ವ ಪ್ರಮಾಣಪತ್ರ ನೀಡಲು ಬರುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ. ರಾಜ್ಯಸಚಿವ ಸಂಪುಟದಲ್ಲಿ ಈ ಬಗ್ಗೆ ನಿರ್ಧರಿಸಿ ವಿಶೇಷ ಪ್ರಕರಣ ಎಂದು ಪರಿಗಣಿಸಿ, ನಿಯಮಾವಳಿಯಲ್ಲಿ ಬದಲಾವಣೆ ತಂದರೆ ಮಾತ್ರ ಹೊರ ರಾಜ್ಯದ ಮೂಲದ ಪೌರ ಕಾರ್ಮಿಕರಿಗೂ ಸಿಂಧುತ್ವ ಪ್ರಮಾಣಪತ್ರ ನೀಡಲು ಸಾಧ್ಯ ಎಂದರು.
ಶಾಸಕ ಮಂಕಾಳ ವೈದ್ಯ ಮಾತನಾಡಿ, ತಂದೆ ಹಾಗೂ ತಾಯಿಗೆ ಎಸ್‌ಸಿ ಜಾತಿ ಪ್ರಮಾಣಪತ್ರವಿದೆ. ಅವರ ಮಕ್ಕಳಿಗೆ ಎಸ್‌ಸಿ ಪ್ರಮಾಣಪತ್ರವಿದ್ದರೂ ಸಿಂಧುತ್ವ ಪ್ರಮಾಣಪತ್ರವನ್ನು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ನೀಡುವುದಿಲ್ಲ ಎಂಬುದು ವಿಚಿತ್ರ ಸಂಗತಿ. 5 ಲಕ್ಷ ಕೊಟ್ಟರೂ ಯಾರೂ ಪೌರ ಕಾರ್ಮಿಕರಾಗಲು ಮುಂದೆ ಬರುವುದಿಲ್ಲ. ನಗರದ ಸ್ವಚ್ಛತೆಗಾಗಿ ಕೆಲಸ ಮಾಡಿದವರಿಗಾಗಿ ಸಿಂಧುತ್ವ ಪ್ರಮಾಣಪತ್ರ ನೀಡಲು ಅಽಕಾರಿಗಳು ಹಿಂದೇಟು ಹಾಕುವುದು ಸರಿಯಲ್ಲ ಎಂದರು.

ಪೌರ ಕಾರ್ಮಿಕರು ಡಾಕ್ಟರ್‌ಗಳಿದ್ದಂತೆ; ಸಚಿವ ವೈದ್ಯ

ವೈದ್ಯರು ರೋಗ ಬಂದ ಮೇಲೆ ಚಿಕಿತ್ಸೆ ನೀಡಿದರೆ ಪೌರ ಕಾರ್ಮಿಕರು ಪರಿಸರವನ್ನು
ಸ್ವಚ್ಚಗೊಳಿಸಿ, ಸಾರ್ವಜನಿಕರಿಗೆ ರೋಗಗಳು ಹರಡದಂತೆ ನೈರ್ಮಲ್ಯ ಕಾಪಾಡುವ ಡಾಕ್ಟರ್ ಗಳು ಎಂದು ಎಂದು ಮೀನುಗಾರಿಕೆ, ಬಂದರು
ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ಉತ್ತರ ಕನ್ನಡ ನಗರ ಸ್ಥಳೀಯ ಸಂಸ್ಥೆಗಳ ಸಂಯುಕ್ತ
ಆಶ್ರಯದಲ್ಲಿ ರವೀಂದ್ರನಾಥ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಆಯೋಜಿಸಿದ ಸ್ವಚ್ಚತಾ ಕಾರ್ಮಿಕರ ಅರಿವು ಸಮಾಗಮ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿಸ್ವಾರ್ಥ ಸೇವೆಯ ಮೂಲಕ ನಗರವನ್ನು ಸ್ವಚ್ಚಾವಾಗಿರಿಸುವ ಪೌರಕಾರ್ಮಿಕರ ಹಿತ ಕಾಪಾಡಲು ನಮ್ಮ ಸರ್ಕಾರ
ಬದ್ಧವಾಗಿದೆ ಪೌರಕಾರ್ಮಿಕರು ಸಂತೋಷದಿAದ ಇದ್ದರೆ ನಗರವು ಸ್ವಚ್ಚವಾಗಿರುತ್ತದೆ. ಯಾರೂ ಮಾಡದ ಕೆಲಸಗಳನ್ನು
ಪೌರಕಾರ್ಮಿಕರು ನಿರ್ವಹಿಸುತ್ತಿದ್ದಾರೆ. ಪೌರಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಒದಗಿಸಲು ಬದ್ಧವಾಗಿದ್ದು,
ಜಿಲ್ಲೆಯಲ್ಲಿ ಪ್ರಥಮಾದ್ಯತೆಯಲ್ಲಿ ಮನೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ದಿನಗೂಲಿ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ 127 ಪೌರ ಕಾರ್ಮಿಕರನ್ನು ಪ್ರಥಮ ಹಂತದಲ್ಲಿ ಖಾಯಂ
ನೌಕರರನ್ನಾಗಿ ಇಂದು ನೇಮಕ ಮಾಡಲಾಗುತ್ತಿದ್ದು, ಬಾಕಿ ಉಳಿದಿರುವ 44 ಪೌರ ಕಾರ್ಮಿಕರನ್ನು ಶೀರ್ಘದಲ್ಲಿ ಖಾಯಂ ನೌಕಕರನ್ನಾಗಿ
ನೇಮಕ ಮಾಡಲಾಗುವುದು ಹಾಗೂ ಇನ್ನೂ 88 ಪೌರಕಾರ್ಮಿಕರನ್ನು ಹಂತ ಹಂತವಾಗಿ ಖಾಯಂ ನೌಕರರನ್ನಾಗಿ ನೇಮಕ
ಮಾಡಲಾಗುವುದು ಎಂದರು.
ಪೌರಕಾರ್ಮಿಕರು ದುಶ್ಚಟಗಳಿಂದ ದೂರ ಉಳಿದು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ತಮ್ಮ ಮಕ್ಕಳನ್ನು ಶಿಕ್ಷಣದಿಂದ
ವಂಚಿತರಾಗಿಸದೇ ಅವರಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯುವಂತೆ ಪ್ರಯತ್ನಿಸಬೇಕು ಎಂದು ಸಚಿವರು
ಹೇಳಿದರು.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, ಪೌರ ಕಾರ್ಮಿಕರ ಹಲವು ವರ್ಷಗಳ ಕನಸು ಇಂದು ನನಸಾಗುತ್ತಿದ್ದು,
127 ಪೌರ ಕಾರ್ಮಿಕರನ್ನು ಖಾಯಂ ನೌಕರರನ್ನಾಗಿ ನೇಮಕ ಮಾಡಲಾಗಿದೆ. ಅವರ ಸಮಸ್ಯೆಗಳಿಗೆ ಜಿಲ್ಲಾಡಳಿತ ಸೂಕ್ತವಾಗಿ ಸ್ಪಂದಿಸುವ
ಜೊತೆಗೆ ಅವರಿಗೆ ಎಲ್ಲಾ ರೀತಿಯ ಸಹಕಾರ ಮತ್ತು ಮೂಲಭೂತ ಸೌಕರ್ಯ ಒದಗಿಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಚಿವರು ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳ 127 ಪೌರಕಾರ್ಮಿಕರಿಗೆ ಖಾಯಂ ನೇಮಕಾತಿ
ಆದೇಶದ ಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಭೀಮಣ್ಣ ಟಿ ನಾಯ್ಕ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರ
ಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ನಗರಾಭಿವೃದ್ಧಿ
ಕೋಶದ ಯೋಜನಾ ನಿರ್ದೇಶಕಿ ಸ್ಟೇಲಾ ವರ್ಗಿಸ್ , ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ಜಾಗ್ರತ ಸಮಿತಿಯ ನಾಮ ನಿರ್ದೇಶಿತ
ಸದಸ್ಯರಾದ ಮಾಲ ಹುಲಸ್ವಾರ, ಹನುಮಂತ ತಳವಾರ, ರಮೇಶ್ ಬಾಬು ಬುದಾಲ್, ಶಿವ ಶಂಕರ, ನಾಗೇಶ ಹರಿಜನ, ಮಂಜೇಶ್ವರ
ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net