ಪೌರ ಕಾರ್ಮಿಕರು ಸ್ವಚ್ಛ ಭಾರತದ ರಾಯಭಾರಿಗಳು

NAREGAL
ನರೇಗಲ್ಲ ಸಮೀಪದ ಅಬ್ಬಿಗೇರಿ ಗ್ರಾಪಂನಲ್ಲಿ ಸೋಮವಾರ ಜರುಗಿದ ಪೌರ ಕಾರ್ಮಿಕ ದಿನಾಚರಣೆಯಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ವೀರಭದ್ರ ಶಿವಾಚಾರ್ಯರು, ಎಂ.ಲೋಹಿತ, ಮೌನೇಶ ತೊಂಡಿಹಾಳ, ಈರಪ್ಪ ಹೊಸಮನಿ, ಚಂದಪ್ಪ ದ್ವಾಸಲ, ಅಂದಪ್ಪ ಐಹೊಳಿ, ತಾಯಪ್ಪ ಕೆಂಗಾರ, ಈರಪ್ಪ ತಳವಾರ ಹನುಮಂತ ದ್ವಾಸಲ ಇದ್ದರು.
Published on

ನರೇಗಲ್ಲ: ಪೌರ ಕಾರ್ಮಿಕರು ಸ್ವಚ್ಛ ಭಾರತದ ರಾಯಭಾರಿಗಳಾಗಿದ್ದಾರೆ. ಪ್ರಕೃತಿಯ ವೈಪರೀತ್ಯಗಳೂಂದಿಗೆ ಸ್ಪರ್ಧಿಸಿ ನಿತ್ಯ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರು ಸ್ವಚ್ಛ ನಾಗರಿಕ ಸಂಸ್ಕೃತಿಯ ನಾಯಕರಾಗಿದ್ದಾರೆ ಎಂದು ಅಬ್ಬಿಗೇರಿ ಹಿರೇಮಠದ ವೀರಭದ್ರ ಶಿವಾಚಾರ್ಯರು ಹೇಳಿದರು.

ಅಬ್ಬಿಗೇರಿಯ ಗ್ರಾಮ ಪಂಚಾಯಿತಿಯಲ್ಲಿ ಅಬ್ಬಿಗೇರಿ ಹೀರೇಮಠ ಮತ್ತು ಪಂಚಾಯಿತಿ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಪೌರ ಕಾರ್ಮಿಕರು ಸ್ವಚ್ಛತಾ ರೂವಾರಿಗಳು. ಕರೊನಾದಂತ ಸಂದಿಗ್ಧ ಸ್ಥಿತಿಯಲ್ಲಿಯೂ ತಮ್ಮ ಜೀವದ ಹಂಗನ್ನು ತೊರೆದು ಬಿಡುವಿಲ್ಲದೆ ಕಾರ್ಯ ನಿರ್ವಹಿಸಿದರು ಎಂದರು.

ಪಿಡಿಒ ಎಂ.ಲೋಹಿತ್ ಮಾತನಾಡಿ, ಪರಿಸರವನ್ನು ಸ್ವಚ್ಛವಾಗಿರಿಸುವಲ್ಲಿ ಪೌರ ಕಾರ್ಮಿಕರ ಕೊಡುಗೆ ಅಪಾರ. ಸ್ವಚ್ಛತಾ ಕಾರ್ಯದ ಮೂಲಕ ಜನರ ಆರೋಗ್ಯವನ್ನು, ಪರಿಸರವನ್ನು, ಗ್ರಾಮವನ್ನು ಸಂರಕ್ಷಿಸುವ ಇವರ ಕಾರ್ಯ ಶ್ಲಾಘನೀಯ ಎಂದರು.

ಮೌನೇಶ ತೊಂಡಿಹಾಳ, ಈರಪ್ಪ ಹೊಸಮನಿ, ಚಂದಪ್ಪ ದ್ವಾಸಲ, ಅಂದಪ್ಪ ಐಹೊಳಿ, ತಾಯಪ್ಪ ಕೆಂಗಾರ, ಈರಪ್ಪ ತಳವಾರ, ಹನುಮಂತ ದ್ವಾಸಲ, ದುರ್ಗಪ್ಪ ದ್ವಾಸಲ, ಕೃಷ್ಣ ಹಿರೇಮನಿ, ಮುದಿಯಪ್ಪ ಗೌಡನಬಾವಿ, ರುದ್ರಪ್ಪ ಅಸುಂಡಿ, ರಮೇಶ ದ್ವಾಸಲ, ಮುತ್ತಪ್ಪ ತಗ್ಗಿನಕೇರಿ, ಬಸವರಾಜ ಜಂತ್ಲಿ, ಬಸವರಾಜ ಮುಧೋಳ, ಪರಸಪ್ಪ ತೊಂಡಿಹಾಳ, ಶರಣಪ್ಪ ತಗ್ಗಿನಕೇರಿ, ಹನುಮಂತ ಐಹೋಳಿ, ಅಶೋಕ ತಳವಾರ, ಪ್ರವೀಣ ದ್ವಾಸಲ, ಮೈಲಾರಪ್ಪ ಹೊಸಮನಿ, ಮಲ್ಲಪ್ಪ ಕೆಂಗಾರ, ಕಾಳಿಂಗಪ್ಪ ಅಸುಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net