

ಚಿಕ್ಕಮಗಳೂರು: ಆಹಾರ ಅರಸಿ ಗದ್ದೆಗೆ ಬಂದಿದ್ದ ಪುನುಗಿನ ಬೆಕ್ಕನ್ನು (ಸಿವೆಟ್ ಕ್ಯಾಟ್) ಕೂದುವಳ್ಳಿ ಗ್ರಾಮದ ರೈತರೊಬ್ಬರು ನಾಯಿಗಳಿಂದ ರಕ್ಷಿಸಿ ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದರು.
ತಾಲೂಕಿನ ಕೂದುವಳ್ಳಿ ಗ್ರಾಮದ ಶೇಷೇಗೌಡರಿಗೆ ಸೇರಿದ ಗದ್ದೆಯಲ್ಲಿ ಮಂಗಳವಾರ ಬೆಳಗ್ಗೆ ಪುನುಗಿನ ಬೆಕ್ಕು ಕಂಡು ಬಂದಿದ್ದು, ನಾಯಿಗಳ ದಾಳಿಗೆ ಅಂಜಿ ಅವಿತುಕೊಳ್ಳಲು ಹವಣಿಸುತ್ತಿತ್ತು. ತಕ್ಷಣ ಶೇಷೇಗೌಡರು ಸೆಣಬಿನ ಚೀಲ ಬಳಸಿ ಬೆಕ್ಕನ್ನು ಸೆರೆ ಹಿಡಿದು ಆಲ್ದೂರು ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದ್ದು, ಅನಂತರ ಅಧಿಕಾರಿಗಳು ಅದನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ.