ಮಹಾನಗರ ಪಾಲಿಕೆ ಅಧಿಕಾರಿಗಳಿಂದ ಕಿರುಕುಳ

8manju6-Web
ಬೆಳಗಾವಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಾಂದಾ ಮಾರ್ಕೆಟ್ ಹಾಗೂ ಝಂಡಾ ಚೌಕ್ ಅಸೋಸಿಯೇಷನ್ ಪದಾಧಿಕಾರಿಗಳು ಪ್ರತಿಭಟಿಸಿದರು. ಪ್ರಭಾವತಿ ಮೂಡಲಗಿ, ದತ್ತಾರಾಮ ದಂಡಕರ್, ಸುರೇಶ ಸೇಲಕೆ, ಮಾರುತಿ ಇದ್ದರು.
Published on

ಬೆಳಗಾವಿ: ನಗರದಲ್ಲಿ ರವಿವಾರ ಪೇಟೆಯಲ್ಲಿ ಕಾಂದಾ ಮಾರುಕಟ್ಟೆಯ ವ್ಯಾಪಾರಿಗಳಿಗೆ ಪಾಲಿಕೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಾಂದಾ ಮಾರ್ಕೆಟ್ ಹಾಗೂ ಝಂಡಾ ಚೌಕ್ ಅಸೋಸಿಯೇಷನ್ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ವರ್ಷಗಳಿಂದ ರವಿವಾರ ಪೇಟೆಯ ಕಾಂದಾ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಿ ಜೀವನ ಸಾಗಿಸುತ್ತಿದ್ದೇವೆ. ಕುಟುಂಬ ನಿರ್ವಹಣೆಗೆ ವ್ಯಾಪಾರವೇ ಮೂಲ ಆಧಾರವಾಗಿದೆ. ಆದರೆ, ಇದೀಗ ಪಾಲಿಕೆ ಅಧಿಕಾರಿಗಳು ಮಾರುಕಟ್ಟೆ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಹೇಳಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಇದರಿಂದ ನೂರಾರು ವ್ಯಾಪಾರಿಗಳು ಸಮಸ್ಯೆ ಎದುರಿಸುವಂತಾಗಿದೆ ಎಂದು ದೂರಿದರು. ಈಗಾಗಲೇ ರವಿವಾರ ಪೇಟೆಯಲ್ಲಿನ ಕಾಂದಾ ಮಾರುಕಟ್ಟೆ ಸ್ಥಳಾಂತರಿಸುವ ವಿಷಯ ಕೋರ್ಟ್‌ನಲ್ಲಿ ಇದೆ. ಆದರೂ ಪಾಲಿಕೆ ಅಧಿಕಾರಿಗಳು ಕಾನೂನು ಬಾಹಿರವಾಗಿ ಮಾರುಕಟ್ಟೆ ತೆರವುಗೊಳಿಸಲು ಮುಂದಾಗಿದ್ದಾರೆ. ಹಾಗಾಗಿ, ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಪಾಲಿಕೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು. ಪ್ರಭಾವತಿ ಮೂಡಲಗಿ, ದತ್ತಾರಾಮ ದಂಡಕರ್, ಸುರೇಶ ಸೇಲಕೆ, ಶಾಂತಾ ನಿರ್ಮಲಕರ್, ಜಾವೀದ್ ತೆಂಗಿನಕಾಯಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net