

ಬೆಳಗಾವಿ: ಕೈಗಾರಿಕೆ, ಹೋಟೆಲ್ ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ ಉತ್ಪಾದನೆ ಆಗುವ ತ್ಯಾಜ್ಯ ವನ್ನು ಅದೇ ದಿನ ವಿಲೇವಾರಿ ಮಾಡಬೇಕು. ರಸ್ತೆ ಬದಿ, ಖಾಲಿ ಪ್ರದೇಶಗಳಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಸೂಚಿಸಿದರು.
ಸೋಮವಾರ ಬೆಳಗ್ಗೆ ಸದಾಶಿವ ನಗರ, ಖಡೇಬಜಾರ, ಅಂಬೇಡ್ಕರ್ ಉದ್ಯಾನವನ, ಕೋತ್ವಾಲ್ ಗಲ್ಲಿ ಸೇರಿದಂತೆ ವಿವಿ ಕಡೆ ಭೇಟಿ ನೀಡಿ ಸ್ವಚ್ಛತೆ ಮತ್ತು ಕಸ ವಿಲೇವಾರಿ ಪರಿಶೀಲನೆ ನಡೆಸಿದರು.
ಸದಾಶಿವ ನಗರದಲ್ಲಿರುವ ಕಸ ವಾಹನ ಶಾಖೆಗೆ ತೆರಳಿ, ವಾಹನ ಚಾಲಕರ ಹಾಜರಾತಿ ಪರಿಶೀಲನೆ ಮಾಡಿದರು.ಅಂಬೇಡ್ಕರ್ ಗಾರ್ಡನ್ ಗೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಿ ಹಾಗೂ ಅಂಬೇಡ್ಕರ ಗಾರ್ಡನ್ನಲ್ಲಿರುವ ನೀರಿನ ಟ್ಯಾಂಕನ್ನು ಪರಿಶೀಲಿಸಿ ಸ್ವಚ್ಛತೆಯನ್ನು ಕಾಪಾಡಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದರು..
ಕೊತವಾಲಗಲ್ಲಿಯ ಭಾಜಿ ಮಾರ್ಕೆಟ್ ಅಲ್ಲಿನ ಸ್ವಚ್ಛತೆಯನ್ನು ಪರಿಶೀಲಿಸಿ ಪೌರಕಾರ್ಮಿಕರಿಗೆ ಸುರಕ್ಷಿತ ಪರಿಕರಣಗಳನ್ನು ನಿರಂತರ ಉಪಯೋಗಿಸಬೇಕೆಂದು ನಿರ್ದೇಶನ ನೀಡಿದರು ಮತ್ತು ಪ್ರತಿದಿನ ರಾತ್ರಿ ತರಕಾರಿ ತ್ಯಾಜ್ಯವನ್ನು ತೆರವುಗೊಳಿಸಬೇಕೆಂದು ನಿರ್ದೇಶನ ನೀಡಿದರು.
ಅದೇ ರೀತಿ ಕಡೆ ಬಜಾರ್ ಗಣಪತಿ ಗಲ್ಲಿ ಹಾಗೂ ನರಗುಂದಕರ ಬಾವೆ ಚೌಕಬಿಟ್ ಭೇಟಿ ನೀಡಿ ಸ್ವಚ್ಛತೆಯನ್ನು ಪರಿಶೀಲಿಸಿ ತರಕಾರಿ ಮಾರುಕಟ್ಟೆಯ ಹಾಗೂ ಕಮರ್ಷಿಯಲ್ ಏರಿಯಾ ತ್ಯಾಜ್ಯವನ್ನು ಅದೇ ದಿನ ರಾತ್ರಿ ತ್ಯಾಜ್ಯವನ್ನು ತೆರವುಗೊಳಿಸಬೇಕೆಂದು ಆರೋಗ್ಯ ನಿರೀಕ್ಷಕರಿಗೆ ನಿರ್ದೇಶನ ನೀಡಿದರು .