ನಗರ ಮಂಡಲ ಕಾರ್ಯಕಾರಿಣಿ ಸಭೆ

13adarshkdga3
Published on

ಮಡಿಕೇರಿ: ಮಡಿಕೇರಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ರಾಕೇಶ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಗರ ಬಿಜೆಪಿ ಮಂಡಲ ಕಾರ್ಯಕಾರಿಣಿ ಸಭೆ ಮಂಗಳವಾರ ನಡೆಯಿತು.


ಪಕ್ಷ ನೀಡಿದ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ನಗರ ಮಂಡಲದ ಸದಸ್ಯರುಗಳ ಸಹಾಯದಿಂದ ನಿರ್ವಹಿಸಿರುವ ಬಗ್ಗೆ ಸವಿತಾ ರಾಕೇಶ್ ಮಾಹಿತಿ ನೀಡಿದರೆ, ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯರವರು, ಪಕ್ಷ ನಿಷ್ಠೆ, ಶಿಸ್ತು, ಸಂಯಮ, ಸಂಘಟನೆ, ಮುಂದಿನ ಚುನಾವಣೆಗೆ ನಾರಿ ಶಕ್ತಿಯ ಜವಾಬ್ದಾರಿ, ಬೂತ್ ಮಟ್ಟದಲ್ಲಿ ಮಹಿಳೆಯರ ಉಪಸ್ಥಿತಿ ಹೆಚ್ಚಿಸುವ ಬಗ್ಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಹಿಳಾ ಸಬಲೀಕರಣಕ್ಕೆ ತೆಗೆದುಕೊಂಡಿರುವ ಹೆಜ್ಜೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.


ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶರೀನ್ ಸುಬ್ಬಯ್ಯ, ಸಮಾಜದ ವಿವಿಧ ರಂಗಗಳಲ್ಲಿ ಮಹಿಳೆಯರ ಪಾತ್ರಗಳ ಬಗ್ಗೆ, ರಾಜ್ಯ ಸರ್ಕಾರ ಮಹಿಳಾ ಕಾರ್ಯಕ್ರಮ ನಡೆಸಲು ನೀಡಿರುವ ಮಾಹಿತಿ ನೀಡಿದರು. ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿತಾ ಪೂವಯ್ಯ, ಸರ್ಕಾರ ಮಹಿಳೆಯರ ಉನ್ನತಿಯ ಬಗ್ಗೆ ತೆಗೆದುಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.


ಸಭೆಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಾದಪ್ಪ, ಎಸ್.ಸಿ.ಸತೀಶ, ಮಡಿಕೇರಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಶ್ವೇತಾ ಪ್ರಶಾಂತ್, ಭವಾನಿ. ಉಪಾಧ್ಯಕ್ಷರುಗಳಾದ ಮಂಜುಳ, ಸುನಿತಾ ಸಂಪತ್ ರುಕ್ಮಿಣಿ, ನಗರಸಭಾ ಸದಸ್ಯರಾದ ಶಾರದಾ, ಗೌರಮ್ಮ, ಇತರರು ಉಪಸ್ಥಿತರಿದ್ದರು. ಮಡಿಕೇರಿಯಲ್ಲಿ ೧೦೦೦ ಕ್ಕೂ ಅಧಿಕ ಮಹಿಳೆಯರಿಗೆ ವಾಹನ ಚಾಲನಾ ತರಬೇತಿ ನೀಡಿದ ಬಾಗೀರಥಿರವರನ್ನು ಮಹಿಳಾ ಮೋರ್ಚಾ ವತಿಯಿಂದ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net