ಅಗೆದು ವರ್ಷವಾದರೂ ದುರಸ್ತಿಯಾಗದ ರಸ್ತೆ!

20230722_124942.jpg
Published on


ಬೆಳಗಾವಿ: ಇಲ್ಲಿನ ನೆಹರು ನಗರದಲ್ಲಿ ಮಹೇಶ್ವರ ಅಂದ ಮಕ್ಕಳ ಶಾಲೆಯ ಮುಂಭಾಗದ ರಸ್ತೆ ಅಗೆದು ವರ್ಷ ಕಳೆದರೂ ದುರಸ್ತಿಗೆ ಮುಂದಾಗುತ್ತಿಲ್ಲ ಮಹಾನಗರ ಪಾಲಿಕೆ.
ಕಳೆದ ವರ್ಷವೇ ಕುಡಿಯುವ ನೀರಿನ ಕೊಳವೆ ಮಾರ್ಗ, ಚರಂಡಿ ನಿರ್ಮಾಣ ಇತರೆ ಕಾಮಗಾರಿಗಳಿಗಾಗಿ ಅಲ್ಲಲ್ಲಿ ರಸ್ತೆ ಅಗೆದು ಬಿಡಲಾಗಿದೆ. ಆದರೆ ರಸ್ತೆ ದುರಸ್ತಿ ಮಾಡಿಲ್ಲ. ಮಳೆಗಾಲ ಆರಂಭವಾದರೆ ರಸ್ತೆಯ ಬದಿಯಲ್ಲಿ ನೀರು ಮಡಗಟ್ಟಿ ನಿಲ್ಲುತ್ತಿದೆ. ಈ ಕುರಿತು ಪಾಲಿಕೆ ಇಂಜಿನಿಯರ್ ಗಳಿಗೆ ಮಾಹಿತಿ ನೀಡಿದರು ಪ್ರಯೋಹನವಾಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net