ನಗರದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ವ್ಯಕ್ತಿ ಸಾವು

je721538035802367-abc
Published on

ರಾಣೆಬೆನ್ನೂರ: ಭಿಕ್ಷಾಟನೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಅನಾರೋಗ್ಯದಿಂದ ಬಳಲಿ ಮೃತಪಟ್ಟ ಘಟನೆ ನಗರದ ನಗರಸಭೆ ಕಲಾಭವನದ ಎದುರು ಸೋಮವಾರ ನಡೆದಿದೆ.

ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರ ಗ್ರಾಮದ ದುರುಗಪ್ಪ ತಿರುಕಪ್ಪ ಮುಂಡರಗಿ (43) ಮೃತ ವ್ಯಕ್ತಿ.

ಈತ ನಗರದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ. ಅನಾರೋಗ್ಯದ ಕಾರಣ ಕಲಾಭವನದ ಎದುರು ಮಲಗಿಕೊಂಡ ಜಾಗದಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net