ಪಾಲಿಕೆ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ!

IMG-20231123-WA0011.jpg
Published on


-ಠಾಣೆಯಲ್ಲಿ ಧರಣಿ ಕುಳಿತ ಪಾಲಿಕೆ ಸದಸ್ಯರು
ಬೆಳಗಾವಿ: ಇಲ್ಲಿನ ಭಾಗ್ಯನಗರದಲ್ಲಿ ನಿವಾಸಿಯೊಬ್ಬನು ಕಾನೂನು ಬಾಹಿರವಾಗಿ ಮೊಬೈಲ್ ಟವರ್ ನಿರ್ಮಿಸುತ್ತಿರುವುದನ್ನು ಪ್ರಶ್ನೆಸಿದ್ದ ಪಾಲಿಕೆ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ಗುರುವಾರ ನಡೆದಿದೆ.
ಪಾಲಿಕೆ ಸದಸ್ಯ ಅಭಿಜಿತ ಜವಳಕರ ಹಲ್ಲೆಗೆ ಒಳಗಾದ ವ್ಯಕ್ತಿ.  ಚುನಾಯಿತ ಸದಸ್ಯನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ಬಂಧನಕ್ಕೆ ಆಗ್ರಹಿಸಿ ಪಾಲಿಕೆಯ ಎಲ್ಲ ಸದಸ್ಯರು ಟಿಳಕವಾಡಿ ಠಾಣೆ ಮುಂದೆ ಧರಣಿ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net