ವಿದ್ಯಾರ್ಥಿನಿ ಜೀವ ಉಳಿಸಿದ ಬಸ್ ಸಿಬ್ಬಂದಿಗೆ ಸನ್ಮಾನ

mng-1aug-city bus driver
Published on


ಮಂಗಳೂರು : ನಗರದ ಖಾಸಗಿ ಸಿಟಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಎದೆ ನೋವು ಕಾಣಿಸಿಕೊಂಡ ವಿದ್ಯಾರ್ಥಿನಿಯನ್ನು ಅದೇ ಬಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿ ಜೀವ ರಕ್ಷಣೆ ಮಾಡಿದ ಬಸ್ ಚಾಲಕ ಗಜೇಂದ್ರ ಕುಂದರ್, ನಿರ್ವಾಹಕರಾದ ಸುರೇಶ್ ಮತ್ತು ಮಹೇಶ್ ಪೂಜಾರಿ ಅವರನ್ನು ಕಾರ್ಪೊರೇಟರ್ ಎಂ .ಶಶಿಧರ ಹೆಗ್ಡೆ ಅವರ ನೇತೃತ್ವದಲ್ಲಿ ಚಿಲಿಂಬಿ ಆದರ್ಶ ನಗರದ ಆದರ್ಶ ಫ್ರೆಂಡ್ಸ್ ಅಸೋಸಿಯೇಶನ್ ವಠಾರದಲ್ಲಿ ಸನ್ಮಾನಿಸಲಾಯಿತು.
ಬಸ್ಸು ಮಾಲೀಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ, ಮೈಕಲ್ ಡಿಸಿಲ್ವ, ರಾಜೇಂದ್ರ ಚಿಲಿಂಬಿ, ಪ್ರವೀಣ್ ದಡ್ಡಲ್ಕಾಡ್, ಚಂದ್ರಹಾಸ ಶೆಟ್ಟಿ , ಅಶೋಕ್ ಕೋಟ್ಯಾನ್, ಮಿಥುನ್, ಗೌತಮ್, ಹರೀಶ್, ಅಜಿತ ,ವಸಂತ್, ಶುಭಾ ರಾಜೇಂದ್ರ, ಸಂದೇಶ್ ಕೊಟ್ಟಾರ ಕ್ರಾಸ್,ಅದ್ದು ಸುರತ್ಕಲ್, ಭಾಸ್ಕರ.ಯು. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net