ಚಿಟುಗುಪ್ಪದಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನ

12 HBD 2
ಚಿಟಗುಪ್ಪದಲ್ಲಿ ತಾಲೂಕು ಆಡಳಿತ ಹಾಗೂ ಪುರಸಭೆ ಸಹಯೋಗದಲ್ಲಿ ನನ್ನ ಮಣ್ಣು ನನ್ನ ದೇಶ ಅಭಿಯಾನದ ಅಮೃತ ಕಳಶ ಯಾತ್ರೆಗೆ ಗುರುವಾರ ಚಾಲನೆ ನೀಡಲಾಯಿತು. ತಹಸೀಲ್ದಾರ್ ರವೀಂದ್ರ ದಾಮಾ, ಪುರಸಭೆ ಮುಖ್ಯಾಧಿಕಾರಿ ಹುಸಾಮುದ್ದೀನ್ ಬಾಬಾ ಇತರರಿದ್ದರು.
Published on

ಚಿಟಗುಪ್ಪ: ಪಟ್ಟಣದಲ್ಲಿ ತಾಲೂಕು ಆಡಳಿತ ಹಾಗೂ ಪುರಸಭೆ ಸಹಯೋಗದಡಿ ಗುರುವಾರ ನನ್ನ ಮಣ್ಣು ನನ್ನ ದೇಶ (ಮೇರಿ ಮಾಟಿ ಮೇರಾ ದೇಶ) ಅಭಿಯಾನದ ಅಮೃತ ಕಳಶ ಯಾತ್ರೆಗೆ ಚಾಲನೆ ನೀಡಲಾಯಿತು.

ತಹಸೀಲ್ದಾರ್ ರವೀಂದ್ರ ದಾಮಾ ಹಾಗೂ ಪುರಸಭೆ ಮುಖ್ಯಾಧಿಕಾರಿ ಹುಸಾಮುದ್ದೀನ್ ಬಾಬಾ ನೇತೃತ್ವದಲ್ಲಿ ಪ್ರಮುಖ ರಸ್ತೆ ಮೂಲಕ ಮನೆಗಳಿಗೆ ತೆರಳಿ ಮಣ್ಣು, ಅಕ್ಕಿಯನ್ನು ಕಳಶದಲ್ಲಿ ಸಂಗ್ರಹಿಸಲಾಯಿತು.

ಪುರಸಭೆ ಸದಸ್ಯರಾದ ಮಹ್ಮದ್ ನಸೀರ್ ಅಹ್ಮದ್, ಜಲೀಸಾ ಬೇಗಂ, ಪರಿಸರ ಅಭಿಯಂತರ ಪೂಜಾ, ಕಂದಾಯ ಅಧಿಕಾರಿ ವಿಜಯಕುಮಾರ, ಆರೋಗ್ಯ ನಿರೀಕ್ಷಕ ರವಿಕುಮಾರ, ಸಿಬ್ಬಂದಿ ವೈಶಾಲಿ, ಸರೋಜನಿ, ಕವಿತಾ, ಮಲ್ಲಮ್ಮ, ಅಶ್ವಿನಿ, ಮಂಜುಳಾ, ಇಲಾಹಿ, ಬಕ್ಕಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net