ಕನಿಷ್ಟ ವೇತನ ನಿಗದಿಗೊಳಿಸಲು ಆಗ್ರಹ: ಸೆಂಟರ್ ಆ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಕಾರ್ಯಕರ್ತರ ಪ್ರತಿಭಟನೆ

CITU workers protest Mandya
Published on

ಮಂಡ್ಯ: ರಾಜ್ಯದಲ್ಲಿ ಎಲ್ಲ ಉದ್ದಿಮೆಗಳ ಮೇಲೆ ಕೋಷ್ಟಕಗಳಲ್ಲಿ ನಮೂದಿಸಿರುವ ರೀತಿಯಲ್ಲಿ ಕನಿಷ್ಟ ವೇತನ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಸೆಂಟರ್ ಆ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದ ಬಳಿ ಜಮಾವಣೆಗೊಂಡ ಕಾರ್ಯಕರ್ತರು ಘೋಷಣೆ ಕೂಗಿದರು. ನಂತರ ಕಾರ್ಮಿಕ ಇಲಾಖೆ ಕಚೇರಿವರೆಗೆ ಮೆರವಣಿಗೆ ನಡೆಸಿ ಅಧಿಕಾರಿ ಸವಿತಾ ಅವರಿಗೆ ಮನವಿ ನೀಡಿದರು. ಕಲಂ 5(1)(ಎ) ಅಡಿ ವೇತನ ನಿಗದಿಪಡಿಸುವ ವಿಧಾನವನ್ನು ಕೈಬಿಡಬೇಕು. 2025 ಏ.1ರಿಂದ ಜಾರಿಗೆ ಬರುವಂತೆ ಕನಿಷ್ಟ ವೇತನ ಜಾರಿಯಾಗಬೇಕು. ತುಟ್ಟಿ ಭತ್ಯೆಯನ್ನು 9,469 ಅಂಶಕ್ಕೆ ಹೆಚ್ಚಾಗುವ ಪ್ರತಿ ಅಂಶಕ್ಕೂ ದಿನಕ್ಕೆ ಆರು ಪೈಸೆ ರೀತಿಯಲ್ಲಿ ಪಾವತಿಸುವಂತಾಗಬೇಕು ಎಂದು ಆಗ್ರಹಿಸಿದರು.

ಪ್ರತಿ ಏಪ್ರಿಲ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ತುಟ್ಟಿಭತ್ಯೆಯ ಹೆಚ್ಚಳವನ್ನು ನೀಡುವಂತೆ ಪ್ರಕಟಿಸಬೇಕು. ಪ್ರತಿ ಮೂರು ವರ್ಷಕ್ಕೊಮ್ಮೆ ಕನಿಷ್ಟ ವೇತನದ ಪುನರ್ ವಿಮರ್ಶೆಯಾಗುವಂತಾಗಬೇಕು. ಟೈಲರಿಂಗ್ ಒಳಗೊಂಡಂತೆ ಜವಳಿ ಉದ್ದಿಮೆ ಹಾಗೂ ಬಿಡಿ ಕಾರ್ಮಿಕರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಸಿದರು.

ರಾಜ್ಯದಲ್ಲಿ ಬೀಡಿ ಕಾರ್ಮಿಕರಿಗೆ ವೇತನ ನಿಗದಿಪಡಿಸುವುದರಲ್ಲಿಯೂ ನಿರಂತರವಾಗಿ ಅನ್ಯಾಯವಾಗಿದೆ. ಸಿದ್ದ ಉಡುಪು ತಯಾರಿಕೆಯಲ್ಲಿನ ಕಾರ್ಮಿಕರಿಎಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ಕನಿಷ್ಟ ವೇತನ ನಿಗದಿಪಡಿಸಲು ವರ್ಷಕ್ಕೆ 72 ಯಾರ್ಡ್ ಬಟ್ಟೆಯ ಅವಶ್ಯಕತೆ ಪೂರೈಸುವಂತೆ ಇರಬೇಕು. ಶಿಕ್ಷಣ ವೆಚ್ಚ, ವೈದ್ಯಕೀಯ ಅಗತ್ಯ ಹಬ್ಬಗಳ ಆಚರಣೆಗೆಂದು ಕನಿಷ್ಟ ವೇತನದಲ್ಲಿ ಶೇ.25 ರಷ್ಟು ಪ್ರಮಾಣ ಹೊಂದಿರಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಎಂ.ಎಂ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಖಜಾಂಚಿ ಮಹದೇವಮ್ಮ, ಮುಖಂಡರಾದ ಮಂಜುಳಾರಾಜ್, ಜಯಲಕ್ಷ್ಮಮ್ಮ, ಪ್ರಮೀಳಾಕುಮಾರಿ, ಬಸವರಾಜು, ಶ್ರೀನಿವಾಸ್, ಚಂದ್ರಶೇಖರ್, ಎ.ಬಿ.ಶಶಿಕಲಾ, ಆನಂದ್‌ರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net