

ಕಾರವಾರ: ಕಾರ್ಖಾನೆಗಳಲ್ಲಿ ಉದ್ಯೋಗದ ಅವಽಯನ್ನು ದಿನಕ್ಕೆ 12 ತಾಸಿಗೆ ಹೆಚ್ಚಿಸುವ ಸರ್ಕಾರ ನೀತಿಯನ್ನು ಖಂಡಿಸಿ ಸಿಐಟಿಯು ನೇತೃತ್ವದ ಕಾರ್ಮಿಕ ಸಂಘಟನೆಗಳ ಸದಸ್ಯರು ಜಿಲ್ಲಾ ಕಾರ್ಮಿಕ ಕಲ್ಯಾಣ ಅದಿಕಾರಿ ಕಚೇರಿಯ ಎದುರು ಬುಧವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಕಚೇರಿಯ ಎದುರು ಸೇರಿ ಘೋಷಣೆಗಳನ್ನು ಕೂಗಿದರು. ನಂತರ ಕಾರ್ಮಿಕ ಅಽಕಾರಿಗಳಿಗೆ ತಮ್ಮ ಮನವಿ ಸಲ್ಲಿಸಿದರು. ರಾತ್ರಿ ಪಾಳಿಯಲ್ಲಿ ಮಹಿಳೆಯನ್ನು ದುಡಿಸಬೇಕು ಎಂಬ ನೀತಿ. ದುಡಿಯುವ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷತೆ ನೀಡದೇ ಇರುವುದು ಖಂಡನೀಯ ಎಂದರು. 2019 ರಲ್ಲಿ ಕೇಂದ್ರ ಸರ್ಕಾರದಲ್ಲಿ ಅಂಗೀಕರಿಸಲಾದ ಹೊಸ ಕಾರ್ಮಿಕ ಸಂಹಿತೆ ಕಾರ್ಪೊರೇಟ್ ಕಂಪನಿಗಳ ಪರವಾಗಿದೆ. ಅದನ್ನು ಕೇಂದ್ರವು ರಾಜ್ಯ ಸರ್ಕಾಗಳ ಮೂಲಕ ಜಾರಿಗೆ ತರಲು ಮುಂದಾಗಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ದಿನಕ್ಕೆ 12 ಗಂಟೆ ಕೆಲಸ ಮಾಡುವ ಕಾರ್ಮಿಕ ಕಾಯ್ದೆಯ ತಿದ್ದುಪಡಿಯನ್ನು ಯಾವುದೇ ಜಾರಿಗೆ ತರಬಾರದು. ಹಾಗೇನಾದರೂ ಜಾರಿ ಹಂತದಲ್ಲಿದ್ದರೆ ಅದನ್ನು ತಕ್ಷಣ ಹಿಂಪಡೆಯಬೇಕು. 8 ಗಂಟೆಯ ಅವಽಗೆ 36 ಸಾವಿರ ರೂ. ಕನಿಷ್ಠ ಕೂಲಿಯ ವೇತನ ನಿಗದಿ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಆರ್. ಶಾನಭಾಗ್, ಅಧ್ಯಕ್ಷ ತಿಲಕ ಗೌಡ, ಖಜಾಂಚಿ ನಾಗಪ್ಪ ನಾಯ್ಕ, ಉಪಾಧ್ಯಕ್ಷರು ಸಲಿಂ ಸಯ್ಯದ್, ಪೌರ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ಸ್ಯಾಮ್ಸನ್, ಪ್ರಮುಖರಾದ ತಿಮ್ಮಪ್ಪ ಗೌಡ, ಯಮುನಾ ಗಾಂವ್ಕರ್, ಪ್ರದೀಪ ಗೌಡ, ಭರತ್,ಹನುಂಮತ ಸಿಂಧೋಗಿ, ರೇಣುಕಾ ಹಣಬರ್, ಚಂದ್ರಶೇಖರ, ವಿಠ್ಠಲ ರೇಣಕೆ, ದೀಪಕ್ ಇತರರು ಇದ್ದರು.