ಪ್ರಜ್ವಲ್ ವಿರುದ್ಧ ಸಿಐಟಿಯು ಪ್ರತಿಭಟನೆ: ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ನೀಡುವಂತೆ ಒತ್ತಾಯ

CITU protests against MP Prajwal mandya
Published on

ಮಂಡ್ಯ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ಹಾಗೂ ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ ಬಂಧಿಸುವಂತೆ ಆಗ್ರಹಿಸಿ ನಗರದಲ್ಲಿ ಸಿಐಟಿಯುನಿಂದ ಪ್ರತಿಭಟನೆ ನಡೆಸಲಾಯಿತು.

ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಮನೆಕೆಲಸ ಮಾಡುವವರು ಸೇರಿದಂತೆ ಅಸಂಖ್ಯಾತ ದುಡಿಯುವ ಮಹಿಳೆಯರ ಮೇಲೆ ನಡೆಸಿರುವ ದೇಶ ಮಟ್ಟದಲ್ಲೆ ಜನಪ್ರತಿನಿಧಿಗಳಿಂದ ನಡೆದಿರುವ ಅತ್ಯಂತ ಘನಘೋರ ಘಟನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂವಿಧಾನದ ಅನುಚ್ಛೇದ 21ರ ಪ್ರಕಾರ ಮಹಿಳೆಯರು ಮಾನವ ಘನತೆಯಿಂದ ಬದುಕುವ ಹಕ್ಕನ್ನು ಕೊಡುತ್ತದೆ. ಅದರಂತೆ ಮಹಿಳೆಯರು ಘನತೆಯ ಬದುಕನ್ನು ನಡೆಸಲು ಕೆಲಸದ ಸ್ಥಳದಲ್ಲಿನ ಲೈಂಗಿಕ ಕಿರುಕುಳ ತಡಗಟ್ಟಲು ಅನುಷ್ಠಾನ ಸಮಿತಿ ಸ್ಥಾಪಿಸಬೇಕು. ತನಿಖಾ ತಂಡ ಪ್ರಭಾವಿ ರಾಜಕಾರಣಿಗಳ ಒತ್ತಡಕ್ಕೆ ಮಣಿಯಬಾರದು. ಹೊಳೆನರಸಿಪುರ ಪೋಲೀಸ್ ಠಾಣಾಧಿಕಾರಿಯು ದೂರು ದಾಖಲು ಮಾಡಿಕೊಳ್ಳುವಾಗ ಅತ್ಯಾಚಾರ ಸೆಕ್ಷನ್ ಕೈಬಿಟ್ಟಿದ್ದು, ಕೂಡಲೇ ಅಧಿಕಾರಿಯನ್ನು ಅಮಾನತು ಮಾಡಬೇಕು. ವಿಡಿಯೋದಲ್ಲಿರುವ ವಿವಿಧ ಮಹಿಳೆಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕು. ಜತೆಗೆ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಭದ್ರತೆ ಒದಗಿಸಿ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net