ಸಿಐಟಿಯುನಿಂದ ಕಾರ್ಮಿಕ ದಿನಾಚರಣೆ ಆಚರಣೆ * ಸರ್ಕಾರಗಳು ಕಾರ್ಮಿಕ ವಿರೋಽ ನೀತಿ ಅನುಸರಿಸುತ್ತಿವೆ-ಶರಣ ಬಸವ

raichur
raichur
Published on

ರಾಯಚೂರು ಸಿಐಟಿಯು ಜಿ¯್ಲÁ ಸಮಿತಿಯಿಂದ ನಗರದ ಸಿಐಟಿಯು ಕಾರ್ಯಾಲಯದ ಮುಂದೆ ಕಾರ್ಮಿಕ ದಿನಾಚರಣೆ ನಿಮಿತ್ತ ಸಂಘದ ಜಿಲ್ಲಾಧ್ಯಕ್ಷೆ ಹೆಚ್. ಪದ್ಮಾ ಅವರು ಗುರುವಾರ ಧ್ವಜಾರೋಹಣ ನೆರವೇರಿಸಿದರು.

ನಂತರ ಬಹಿರಂಗ ಸಭೆಯಲ್ಲಿ ಸಮಿತಿಯ ಜಿ¯್ಲÁ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಶರಣಬಸವ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಽ ನೀತಿಯನ್ನು ಅನುಸರಿಸುತ್ತಿವೆ. ಪ್ರಸ್ತುತ ಅಽಕಾರದಲ್ಲಿರುವ ಬಿಜೆಪಿ ನೇತೃತ್ವದ ಕೇಂz ಸರ್ಕಾರ ಕಾರ್ಮಿಕ ವಿರೋಽಯಾದ ನಾಲ್ಕು ಸಂಹಿತೆಗಳನ್ನು ಜಾರಿ ಮಾಡುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ಕಸಿಯಲಾಗುತ್ತಿದೆ.

ಕೇಂದ್ರ ಸರ್ಕಾರವು ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೋರೇಟ್ ಕಂಪನಿಗಳ ಪರವಾಗಿ ಕಾನೂನುಗಳ ತಿದ್ದುಪಡಿ ಮಾಡಿ ಕಾರ್ಮಿಕರ ಹಕ್ಕುಗಳ ಮೇಲೆ ದಾಳಿಯನ್ನು ಮಾಡಲಾಗುತ್ತಿದೆಂದು ಆರೋಪಿಸಿದರು.

ಕೆಪಿಆರ್‌ಎಸ್ ಜಿ¯್ಲÁ ಉಪಾಧ್ಯ ಕ್ಷರಾದ ಕೆ.ಜಿ ವೀರೇಶ ಮಾತನಾಡಿ, ಕಾರ್ಮಿಕರು ತಮ್ಮ ಹಕ್ಕುಗಳ ರಕ್ಷಣೆ ಜತೆಗೆ ಸಾರ್ವಜನಿಕ ಸಮಸ್ಯೆಗಳಿಗೂ ಸ್ಪಂದಿಸುವ ಮೂಲಕ ಕೇಂದ್ರ, ರಾಜ್ಯ ಸರ್ಕಾರದ ಬೆಲೆ ಏರಿ ಕೆ ನೀತಿಗಳು ಮತ್ತು ಧರ್ಮದ ಆಧಾರದÀಲ್ಲಿ ಜನರ ಐಕ್ಯತೆಯನ್ನು ಒಡೆಯುವ ನೀತಿಗಳ ವಿರುದ್ಧ ಹೋರಾಟಕ್ಕೆ ಮುಂದಾಗಬೇ ಕೆಂದರು.

ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ರವಿ ಮಾತನಾಡಿದರು. ನಂತರ ವಿವಿಧ ವೃತ್ತಗಳಲ್ಲಿ ಕಾರ್ಮಿಕರ ರ‍್ಯಾಲಿಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಸಿಐಟಿಯು ಮುಖಂಡರಾದ ವರಲಕ್ಷಿ÷್ಮÃ ,ಚನ್ನರೆಡ್ಡಿ, ಗೋವಿಂದ ದಾಸ್, ರಾಜಶೇಖರ, ಗುರು,ಶರಣಪ್ಪ, ಈರಣ್ಣ ಸ್ವಾಮಿ, ಗೋಕುರಮ್ಮ, ಗೌರಮ್ಮ, ಚಂದ್ರಕಲಾ, ಮಂಗಮ್ಮ, ರಾಮರೆಡ್ಡಿ, ಕೆ.ಮ¯್ಲÉÃಶಪ್ಪ ಸೇರಿ ಅನೇಕರು ಇದ್ದರು.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net