ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ ಸರಿಯಲ್ಲ - ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್

120120 Sindhanuru Pramod mutalik
Published on

ಸಿಂಧನೂರು: ದೇಶದಲ್ಲಿ ಪೌರತ್ವ ನೋಂದಣಿ/ತಿದ್ದುಪಡಿ ಕಾಯ್ದೆ ವಿರೋಧ ಸರಿಯಲ್ಲ. ಇದನ್ನು ಸಂಘಟನೆ ಖಂಡಿಸುತ್ತದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ತಿಳಿಸಿದರು.

ನಗರದ ಸರ್ಕಿಟ್‌ಹೌಸ್‌ನಲ್ಲಿ ಭಾನುವಾರ ಸುದ್ದಿಗಾರೊಂದಿಗೆ ಮಾತನಾಡಿ, ತಿದ್ದುಪಡಿ ವಿರೋಧಕ್ಕೆ ಮೂಲಕ ಕಾರಣ ರೋಹಿಂಗ್ಯಾ ಮುಸ್ಲಿಂ, ಸಿಯಾ, ಅಹಮದಿಯರನ್ನು ಸೇರಿಸಿ ಎನ್ನುತ್ತಿದ್ದಾರೆ. ಈಗಾಗಲೇ ಭಾರತ ಸಾಕಷ್ಟು ಕಳೆದುಕೊಂಡಿದೆ. ಪಾಕಿಸ್ತಾನ, ಇರಾನ್, ಬಾಂಗ್ಲಾದೇಶ ಹೋಗಿದೆ. ಇಸ್ಲಾಂ ದೇಶ ಮಾಡಲು ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಸ್ವಾಗತಿಸಿ ದೇಶದ ಪ್ರಮುಖ ಸ್ವಾಮೀಜಿಗಳು, ಸಾಹಿತಿಗಳು ಹಾಗೂ ಸಿನಿಮಾ ನಟರ ಸಹಿ ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದರು.

ದೇಶದ ಹಿತ ಬದಿಗಿಟ್ಟು ಜನರನ್ನು ಪ್ರಚೋದಿಸಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಇಂಥ ವಿಷಯಗಳಲ್ಲಿ ರಾಜಕೀಯ ಮಾಡಬಾರದು. ಮೊದಲು ದೇಶದ ಸುರಕ್ಷತೆಗೆ ಬೆಂಬಲಿಸಬೇಕು ಎಂದ ಅವರು ಬಿಜೆಪಿಯಲ್ಲಿ ಪ್ರಾಮಾಣಿಕರಿಗೆ ಮನ್ನಣೆ ಇಲ್ಲ. ದುಡ್ಡು, ಜಾತಿ ಇದ್ದವರಿಗೆ ಮಣೆ ಹಾಕಲಾಗುತ್ತಿದೆ ಎಂದು ದೂರಿದರು. ಬಸವರಾಜ ಗೌಡನಬಾವಿ, ಹನುಮೇಶ ಓಲೇಕಾರ, ಮಹಾದೇವ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net