ಕಸದ ಕಸಿವಿಸಿಗೆ ನಾಗರಿಕರು ಹೈರಾಣ

26_10_2025_BGR_RURAL_PAGE_5B
Published on

ಆನೇಕಲ್​ : ತಾಲೂಕಿನ ಅತ್ತಿಬೆಲೆ ಪುರಸಭಾ ವ್ಯಾಪ್ತಿಯ ಮುಖ್ಯ ರಸ್ತೆಗಳ ಪಕ್ಕದಲ್ಲಿ ಕಸದ ರಾಶಿಯೇ ತುಂಬಿದ್ದು, ಆನೇಕಲ್​ ಹಾಗೂ ತಮಿಳುನಾಡು ಭಾಗದಿಂದ ಬರುವ ವಾಹನಗಳು ಕಸದ ಮೇಲೆಯೇ ಸಂಚಾರ ಮಾಡಬೇಕಾದ ದುಸ್ಥಿತಿ ನಿಮಾರ್ಣವಾಗಿದೆ. ಪ್ರತಿದಿನ ಮನೆಗಳಿಂದ ಹಾಗೂ ಅಂಗಡಿಗಳ ಕಸವನ್ನು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡಲು ವ್ಯವಸ್ಥೆ ಕಲ್ಪಿಸುವಲ್ಲಿ ಪುರಸಭಾ ಆಡಳಿತ ಮಂಡಳಿ ವಿಫಲವಾಗಿದೆ. ಆದ್ದರಿಂದ ಜನರು ಕಸವನ್ನು ರಸ್ತೆ ಕ್ಕಪಕ್ಕದಲ್ಲಿ ಸುರಿಯುತ್ತಿದ್ದಾರೆ. ಇದರಿಂದ ಸಾಂಕ್ರಾಮಿಕ ಹರಡುವ ಭೀತಿ ಎದುರಾಗಿದೆ. ಈ ಭಾಗದಲ್ಲಿ ಪ್ರಮುಖ ದೇವಾಲಯಗಳಿದ್ದು, ಪ್ರತಿದಿನ ನೂರಾರು ಜನ ಸಂಚರಿಸುತ್ತಾರೆ. ದೇವಾಲಯದ ಮುಂಭಾಗದಲ್ಲೂ ಕಸದ ರಾಶಿ ಸುರಿದಿದ್ದು, ದಾರಿಹೋಕರು ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪುರಸಭಾ ಅಧಿಕಾರಿಗಳು ಸಾರ್ವಜನಿಕರಿಗೆ ಕಸ ವಿಲೇವಾರಿ ಕುರಿತು ಜಾಗೃತಿ ಮೂಡಿಸಿ, ರಸ್ತೆಯ ಅಕ್ಕಪಕ್ಕದಲ್ಲಿ ಕಸ ಹಾಕುವವರ ಮೇಲೆ ಕ್ರಮ ಕೈಗೊಂಡು ಸಮಸ್ಯೆಗೆ ಮುಕ್ತಿ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅತ್ತಿಬೆಲೆ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಸದ ವಾಸನೆಯಲ್ಲೇ ಪ್ರತಿದಿನ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿಮಾರ್ಣವಾಗಿದೆ. ಶಾಲಾ ಮಕ್ಕಳು ಈ ರಸ್ತೆಯಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ. > ಬಾಬು ಸ್ಥಳಿಯ ಕಸದ ರಾಶಿಗಳನ್ನು ಹಾಗೆ ಬಿಡುತ್ತಿರುವ ಹಿನ್ನೆಲೆ ಬೀದಿ ನಾಯಿಗಳ ಕಟ ಹೆಚ್ಚಾಗಿದ್ದು, ಜನ ಹಾಗೂ ಮಕ್ಕಳು ಓಡಾಡಲು ಭಯಪಡಬೇಕಾದ ಪರಿಸ್ಥಿತಿ ನಿಮಾರ್ಣವಾಗಿದೆ. ಹಾಗಾಇ ಅಧಿಕಾರಿಗಳು ಶ್ರೀ ಕಸದ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. > ತ್ರಿವೇಣಿ ಅತ್ತಿಬೆಲೆ ನಿವಾಸಿ-

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net