ಪೌರ ಕಾರ್ಮಿಕರೇ ಸಮಾಜದ ಮೊದಲ ವೈದ್ಯರು: ಟಿ.ಬಾಲಚಂದ್ರ

20sor1
ಸೊರಬದಲ್ಲಿ ಪೌರ ಕಾರ್ಮಿಕರಿಗಾಗಿ ಹಮ್ಮಿಕೊಂಡಿದ್ದ ಕ್ರೀಡಾಕೂಟವನ್ನು ಟಿ.ಬಾಲಚಂದ್ರ ಗುಂಡು ಎಸೆಯುವ ಮೂಲಕ ಉದ್ಘಾಟಿಸಿದರು. ಎಂ.ಡಿ.ಉಮೇಶ್, ಈರೇಶ್ ಮೇಸಿö, ರಾಧಮ್ಮ, ಮಂಜುನಾಥ್, ಎಸ್.ಲಕ್ಷಿ÷್ಮÃನಾರಾಯಣ, ಶ್ರೀರಂಜನಿ, ಪ್ರೇಮಾ ಟೋಕಪ್ಪ, ಚಂದನ್ ಇತರರಿದ್ದರು.
Published on

ಸೊರಬ: ನಿತ್ಯ ಪೌರ ಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಪಟ್ಟಣದ ಸ್ವಚ್ಛತೆಗೆ ಹಗಲಿರುಳು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಪುರಸಭೆ ಮುಖ್ಯಾಽಕಾರಿ ಟಿ.ಬಾಲಚಂದ್ರ ಹೇಳಿದರು.

ಬುಧವಾರ ಪಟ್ಟಣದ ಎಸ್.ಬಂಗಾರಪ್ಪ ಕ್ರೀಡಾಂಗಣದಲ್ಲಿ ಪುರಸಭೆಯಿಂದ ಪೌರ ಕಾರ್ಮಿಕರ ದಿನಾಚರಣೆ ನಿಮಿತ್ತ ಪೌರ ಕಾರ್ಮಿಕರು, ನೀರು ಸರಬರಾಜು ಸಹಾಯಕರು, ಅಽಕಾರಿಗಳು ಹಾಗೂ ಸಿಬ್ಬಂದಿಗೆ ಹಮ್ಮಿಕೊಂಡ ಕ್ರೀಡಾಕೂಟವನ್ನು ಗುಂಡು ಎಸೆಯುವ ಮೂಲಕ ಚಾಲನೆ ನೀಡಿ ಮಾತನಾಡಿ, ಸುಂದರ ಪಟ್ಟಣ ಹಾಗೂ ಜನರ ಆರೋಗ್ಯ ಕಾಪಾಡುವ ಮೊದಲ ವೈದ್ಯ ಎಂದರೆ ಅದು ಪೌರ ಕಾರ್ಮಿಕರು. ಸರ್ಕಾರದ ಸೌಲಭ್ಯಗಳನ್ನು ಕಾರ್ಮಿಕರಿಗೆ ತಲುಪಿಸುವ ಜತೆಗೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಕ್ರೀಡಾಕೂಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸರ್ಕಾರ ಆಯೋಜಿಸುತ್ತಿದೆ. ಪೌರ ಕಾರ್ಮಿಕರಿಗೆ ನೈತಿಕ ಶಕ್ತಿ ತುಂಬಲು ಪೌರ ಕಾರ್ಮಿಕರ ದಿನ ಆಚರಿಸಲಾಗುತ್ತಿದೆ. ಅಂದು ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಈರೇಶ್ ಮೇಸ್ತಿç ಮಾತನಾಡಿ, ಸೈನಿಕರು ದೇಶದ ಗಡಿಯನ್ನು, ನಾಡಿಗೆ ಅನ್ನ ನೀಡುವ ರೈತ ಮತ್ತು ಜನರ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರು ದೇಶದ ಪ್ರಮುಖ ಅಂಗಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಪುರಸಭೆ ಸದಸ್ಯ ಎಂ.ಡಿ.ಉಮೇಶ್ ಮಾತನಾಡಿ, ಪೌರ ಕಾರ್ಮಿಕರಿಲ್ಲದ ನಗರಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಸರ್ಕಾರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ರಾಜ್ಯವು ಸ್ವಚ್ಛತೆಯಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿರಲು ಪೌರ ಕಾರ್ಮಿಕರೇ ಕಾರಣ. ಅಂತಹ ಕಾರ್ಮಿಕರಿಗೆ ವರ್ಷದಲ್ಲಿ ಒಂದು ದಿನ ಮೀಸಲಿಟ್ಟು ಗೌರವ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.
ಸದಸ್ಯರಾದ ಶ್ರೀರಂಜನಿ ಪ್ರವೀಣ್‌ಕುಮಾರ್ ದೊಡ್ಮನೆ, ಪ್ರೇಮಾ ಟೋಕಪ್ಪ, ಪರಿಸರ ಅಭಿಯಂತ ಚಂದನ್, ಕಂದಾಯ ಅಽಕಾರಿ ಎಸ್.ಲಕ್ಷಿ÷್ಮÃನಾರಾಯಣ, ಕಂದಾಯ ನಿರೀಕ್ಷಕ ಜಿ.ವಿನಾಯಕ, ಆರೋಗ್ಯ ನಿರೀಕ್ಷಕ ರಣಜಿತ್ ಕುಮಾರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಲಿಂಗರಾಜ ಒಡೆಯರ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್, ಕಾರ್ಮಿಕರಾದ ಏಳುಕೋಟಿ, ಲಾಜರ್, ಎಂ.ರಾಜು, ಡಿ.ಮಂಜಪ್ಪ, ಶಿವಪ್ಪ, ಆರ್.ರಮೇಶ್, ರಾಧಮ್ಮ, ಮಂಜುಳಾ, ಪ್ರಶಾಂತ್, ಕಾರ್ತಿಕ್, ಪಿ.ಮಾಲತೇಶ್, ಬಿ.ಉಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net