

ನರೇಗಲ್ಲ: ಮಳೆ, ಗಾಳಿ, ಚಳಿ, ಬಿಸಿಲು ಎನ್ನದೆ ಸದಾಕಾಲ ಸಾರ್ವಜನಿಕರ ಸೇವೆಯಲ್ಲಿ ತೊಡಗಿರುವ ಪೌರ ಕಾರ್ವಿುಕರು ನಿಜವಾದ ಕಾಯಕಯೋಗಿಗಳು. ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ನರೇಗಲ್ಲ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಹೇಶ ನಿಡಶೇಸಿ ಹೇಳಿದರು.
ರಾಜ್ಯ ಪೌರ ನೌಕರರ ಸಂಘ ಮತ್ತು ನರೇಗಲ್ಲ ಘಟಕ ಹಾಗೂ ನರೇಗಲ್ಲ ಪಟ್ಟಣ ಪಂಚಾಯಿತಿ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೌರ ಕಾರ್ವಿುಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿತ್ಯವೂ ಬೆಳಗಿನ ಜಾವ ಎದ್ದು ಪಟ್ಟಣದ ಪ್ರಮುಖ ಬೀದಿಗಳ ಕಸಗೂಡಿಸಿ, ಓಣಿಗಳಲ್ಲಿನ ಕಸ ತಗೆದು ಸಾರ್ವಜನಿಕರ ಆರೋಗ್ಯದ ಕಡೆಗೆ ಗಮನ ನೀಡುವ ಅವರ ಕಾರ್ಯ ಶ್ಲಾಘನೀಯವಾದುದು ಎಂದರು.
ಪ.ಪಂ. ಅಧ್ಯಕ್ಷ ಫಕೀರಪ್ಪ ಮಳ್ಳಿ ಮಾತನಾಡಿ, ಪೌರ ಕಾರ್ವಿುಕರು ಪಟ್ಟಣದಲ್ಲಿ ಯಾವುದೇ ಸ್ವಚ್ಛತೆ ಕಾರ್ಯದಲ್ಲಿ ಬೇಸರ ಇಲ್ಲದೆ ತಮ್ಮ ಕಾರ್ಯ ಮಾಡುತ್ತಿದ್ದಾರೆ. ನಿಜಕ್ಕೂ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಪೌರಕಾರ್ವಿುಕರ ಪಾತ್ರ ಅತ್ಯಮೂಲ್ಯವಾಗಿದೆ ಎಂದರು.
ಉಪನ್ಯಾಸಕ ಶಿವಾನಂದ ಗೋಗೇರಿ ಮಾತನಾಡಿ, ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ವಿುಕರ ಕಾಯಕ ದೊಡ್ಡದು. ಎಂದಿಗೂ ತಮ್ಮ ಕಾಯಕದ ಬಗ್ಗೆ ನಿರಾಸಕ್ತಿ ತೋರಿಸಬಾರದು. ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಬೇಕು ಎಂದರು.
ಪ.ಪಂ. ಸದಸ್ಯ ರಾಚಯ್ಯ ಮಾಲಗಿತ್ತಮಠ, ಮಲ್ಲಿಕಾರ್ಜುನಗೌಡ ಭೂಮನಗೌಡ್ರ, ಜ್ಯೋತಿ ಪಾಯಪ್ಪಗೌಡ್ರ ಮಾತನಾಡಿದರು ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ, ಸಂಘದ ಜಿಲ್ಲಾಧ್ಯಕ್ಷ ರಮೇಶ ಹಲಗಿಯವರ, ಉಪಾಧ್ಯಕ್ಷ ಶಂಕ್ರಪ್ಪ ದೊಡ್ಡಣ್ಣವರ, ಪ.ಪಂ. ಸದಸ್ಯರಾದ ಮುತ್ತಪ್ಪ ನೂಲ್ಕಿ, ಶ್ರೀಶೈಲಪ್ಪ ಬಂಡಿಹಾಳ, ದಾವುದಲಿ ಕುದರಿ, ವಿಜಯಲಕ್ಷ್ಮಿ ಚಲವಾದಿ, ಬಸೀರಾಬಾನು ನದಾಫ್, ಅಕ್ಕಮ್ಮ ಮಣ್ಣೊಡ್ಡರ, ವಿಶಾಲಾಕ್ಷಿ ಹೊಸಮನಿ, ಸುಮಿತ್ರಾ ಕಮಲಾಪೂರ, ಮಂಜುಳಾ ಹುರಳಿ, ಮಲ್ಲಿಕಸಾಬ ರೋಣದ, ಈರಪ್ಪ ಜೋಗಿ, ಫಕೀರಪ್ಪ ಬಂಬ್ಲಾಪುರ, ನರೇಗಲ್ಲ ಘಟಕದ ಅಧ್ಯಕ್ಷ ನೀಲಪ್ಪ ಚಳ್ಳಮರದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಆರೀಫ್ಬೇಗ್ ಮಿರ್ಜಾ ನಿರೂಪಿಸಿ, ಸ್ವಾಗತಿಸಿದರು. ಎ.ಎಸ್. ಮೆಣಸಗಿ ವಂದಿಸಿದರು.