

ಸಿಂಧನೂರು: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸ್ಫೂರ್ತಿಯ ಸೆಲೆಯಾಗಿದ್ದಾರೆ ಎಂದು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.
ಇದನ್ನೂ ಓದಿ: ಆರೋಗ್ಯ ರಕ್ಷಣೆಯಲ್ಲಿ ಪೌರ ಕಾರ್ಮಿಕರ ಸೇವೆ ಅನನ್ಯ
ನಗರದ ಕನಕದಾಸ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಹಾಗೂ ಸಿಂಧನೂರು ವಿಧಾನಸಭೆ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಸೇವಾ ಪಾಕ್ಷಿಕ-2025, ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಧಾನಿ ಮೋದಿ ಅವರು ಎಲ್ಲ ದೇಶಗಳು ಭಾರತದತ್ತ ತಿರುಗಿ ನೋಡುವಂತೆ ಸುಧಾರಣೆ ಮಾಡಿದ್ದಾರೆ. ಯುಪಿಎ ಸರ್ಕಾರ ದೇಶವನ್ನು ಬಡತನದಲ್ಲಿಟ್ಟಿತ್ತು. ಮೋದಿ ಅವರು ಎರಡು ಅವಧಿಯಲ್ಲೂ ಸಾಕಷ್ಟು ಬದಲಾವಣೆ ತಂದು ದೇಶದ ಘನತೆ, ಗೌರವ ಹೆಚ್ಚಿಸಿದ್ದಾರೆ. ಇಂಥ ಪ್ರಧಾನಿಯನ್ನು ಹೊಂದಿರುವುದು ಎಲ್ಲರ ಭಾಗ್ಯ. ಅವರ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ಹಕ್ಕಿಲ್ಲ. ಪೌರ ಕಾರ್ಮಿಕರು ನಿಜವಾದ ಕಾಯಕ ಯೋಗಿಗಳು ಎಂದರು.
ಶಾಸಕ ಅರವಿಂದ ಬೆಲ್ಲದ್ ಮಾತನಾಡಿ, ಸೇವಾ ಪಾಕ್ಷಿಕ ಎನ್ನುವುದಕ್ಕೆ ಬಿಜೆಪಿ ಅರ್ಥ ಕಂಡುಕೊಂಡಿದೆ. ದೇಶ ಸೇವೆಗೆ ಸಂಬಂಧಿಸಿದ ಚಟುವಟಿಕೆಗಳು ಪಕ್ಷದಿಂದ ನಡೆಸಲಾಗುತ್ತಿದೆ. ಪೌರ ಕಾರ್ಮಿಕರನ್ನು ಗೌರವಿಸುವುದು ಮಹತ್ವದ ಕಾರ್ಯ ಎಂದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ, ಮುಖಂಡ ಕೆ.ಕರಿಯಪ್ಪ, ಮಾಜಿ ಶಾಸಕ ಡಾ.ಬಸವರಾಜ ಕ್ಯಾವಟರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಗ್ರಾಮೀಣ ಬಿಜೆಪಿ ಅಧ್ಯಕ್ಷ ವೆಂಕೋಬ ನಾಯಕ, ನಗರ ಘಟಕ ಅಧ್ಯಕ್ಷ ಸಿದ್ದರಾಮೇಶ ಮನ್ನಾಪುರ, ಗ್ರಾಮೀಣ ಮಹಿಳಾ ಘಟಕ ಅಧ್ಯಕ್ಷೆ ಮಹಾನಂದಮ್ಮ, ನಗರಮೋರ್ಚಾ ಅಧ್ಯಕ್ಷೆ ಕೆ.ಹನುಮೇಶ, ಪ್ರಮುಖರಾದ ಉಮೇಶ ಯಾದವ, ನಿರುಪಾದೆಪ್ಪ ಜೋಳದರಾಶಿ, ನಬಿ, ಸಿರಾಜ್ ಪಾಷಾ, ಸುರೇಶ ನೆಕ್ಕಂಟಿ, ಪರಮೇಶಪ್ಪ ಆದಿಮನಿ, ಸುರೇಶ ಹಚ್ಚೊಳ್ಳಿ ಇತರರಿದ್ದರು.