ಅಪರಾಧ ತಡೆಗೆ ನಾಗರಿಕರ ಸಹಕಾರ ಅಗತ್ಯ

Published on

ಪಿಎಸ್​ಐ ವೇಣುಗೋಪಾಲ್​ ಅಭಿಮತ

ವಿಜಯವಾಣಿ ಸುದ್ದಿಜಾಲ ಶಿಡ್ಲಘಟ್ಟ

ಸಮಾಜದಲ್ಲಿ ಕಾನೂನು ಸುವಸ್ಥೆ ಕಾಪಾಡುವ ಜತೆಗೆ ಅಪರಾಧ ಚಟುವಟಿಕೆ ನಿಯಂತ್ರಿಸಲು ನಾಗರಿಕರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಪೊಲೀಸ್​ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಶಿಡ್ಲಘಟ್ಟ ನಗರ ಠಾಣೆ ಪಿಎಸ್​ಐ ವೇಣುಗೋಪಾಲ್​ ತಿಳಿಸಿದರು.

ನಗರದಲ್ಲಿ ಪೊಲೀಸ್​ ಇಲಾಖೆಯಿಂದ ಮನೆ ಮನೆಗೆ ಪೊಲೀಸ್​ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಪೊಲೀಸ್​ ಇಲಾಖೆಗೆ ತಿಳಿಸಬೇಕು. ವಿಶೇಷವಾಗಿ ನಾಗರಿಕರ ಸಹಾಯವಾಣಿ 112 ಟೋಲ್​ ಫ್ರೀ ಸಂಖ್ಯೆಗೆ ಕರೆ ಮಾಡಿ ಅಪರಾಧ ಚಟುವಟಿಕೆ ನಿಯಂತ್ರಿಸಲು ಸಹಕರಿಸಬೇಕು. ಅಂದರ್​ ಬಾಹರ್​, ಗಾಂಜಾ ಮಾರಾಟ ಕೃತ್ಯಗಳು ಕಂಡುಬಂದಲ್ಲಿ ಇಲಾಖೆಗೆ ತಿಳಿಸಿ. ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿಡಲಾಗುವುದು. ಜನರ ಸಮಸ್ಯೆಗಳಿಗೆ ಪರಿಹರಿಸಲು ಅಭಿಯಾನ ಪ್ರಾರಂಭಿಸಿದ್ದು, ನಾಗರಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ನಗರಸಭೆ ಸದಸ್ಯ ಶಬ್ಬೀರ್​, ಪಿಎಲ್​ಡಿ ಬ್ಯಾಂಕ್​ ನಿರ್ದೇಶಕ ಮುರಳಿ, ಗುತ್ತಿಗೆದಾರ ಕೆ.ಬಿ.ಮಂಜುನಾಥ್​, ಪೊಲೀಸ್​ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net