ಸಿಐಟಿ ಪ್ರಾಂಶುಪಾಲ ಡಾ.ಸುರೇಶ್​ಗೆ ಐಇಟಿಇ, ಪ್ರೊಫ್​ ಪ್ರಶಸ್ತಿ

Published on

ಗುಬ್ಬಿ: ಇಲ್ಲಿನ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯ (ಸಿಐಟಿ)ನ ನಿರ್ದೇಶಕ ಹಾಗೂ ಪ್ರಾಂಶುಪಾಲ ಡಾ.ಡಿ.ಎಸ್​.ಸುರೇಶ್​ ಅವರಿಗೆ ಭಾರತ ಎಲೆಕ್ಟ್ರಾನಿಕ್ಸ್​ ಮತ್ತು ಟೆಲಿಕಮ್ಯುನಿಕೇಷನ್​ ಇಂಜಿನಿಯರ್​ ಸಂಸ್ಥೆ (ಐಇಟಿಇ)ಯಿಂದ ಪ್ರತಿಷ್ಠಿತ "ಐಇಟಿಇ&ಪ್ರೊಫ್​ ಎಸ್​.ವಿ.ಸಿ.ಅಯ್ಯ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ಪ್ರಶಸ್ತಿಯನ್ನು ಸೆ.27&28ರಂದು ಚಂಡೀಗಢದಲ್ಲಿ ಆಯೋಜನೆಗೊಂಡಿದ್ದ ಸಿಎಸ್​ಐಆರ್​ ಸಮ್ಮೇಳನದಲ್ಲಿ, ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷ ಪ್ರೊ.ಎಂ.ಜಗದೀಶ್​ ಕುಮಾರ್​ ಹಾಗೂ ಕೇಂದ್ರ ಸಾರ್ವಜನಿಕ ಸೇವಾ ಆಯೋಗದ ಅಧ್ಯಕ್ಷ ಡಾ.ಅಜಯ್​ ಕುಮಾರ್​ ವಿತರಿಸಿದರು.

ವಿದ್ಯಾರ್ಥಿ ಮಾರ್ಗದರ್ಶನ, ಸಂಶೋಧನೆ ಹಾಗೂ ಎಲೆಕ್ಟ್ರಾನಿಕ್ಸ್​ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಪರಿಗಣಿಸಿ ಈ ಪ್ರಶಸ್ತಿ ಲಭಿಸಿದೆ. ಸಾಧನೆಗೆ ಸಿಐಟಿ ಸಮೂಹದ ಅಧ್ಯಕ್ಷ, ಮಾಜಿ ಸಂಸದ ಜಿ.ಎಸ್​.ಬಸವರಾಜ್​ ಹಾಗೂ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net