ಸಿಐಟಿಯು ಬಂಡಿಗಾಲಿಗೆ ಒಲಿದ ಚಿನ್ನದ ಕಿರೀಟ

hutti citu
Published on

ಹಟ್ಟಿಚಿನ್ನದಗಣಿ: ಹಟ್ಟಿಚಿನ್ನದಗಣಿ ಕಂಪನಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಚುನಾವಣೆಯಲ್ಲಿ ಈ ಬಾರಿ ಗಣಿ ಕಾರ್ಮಿಕರು ಸಿಐಟಿಯುನ ಬಂಡಿಗಾಲಿ ಚಿಹ್ನೆಗೆ ಮೂರು ವರ್ಷದ ಅಧಿಕಾರ ನೀಡಿದ್ದಾರೆ.

ಕಾರ್ಮಿಕ ಸಂಘದ ಒಟ್ಟು 25 ಸ್ಥಾನಗಳಿಗೆ ಜೂ.21ರಂದು ಚುನಾವಣೆ ನಡೆದಿತ್ತು. ಭಾನುವಾರ ಮತ ಎಣಿಕೆ ನಡೆಯಿತು. ಸಂಘದ ಮುಖ್ಯ ಹುದ್ದೆಗಳೆಂದರೆ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ.ಅದರಂತೆ ಅಧ್ಯಕ್ಷರಾಗಿ ಸಿಐಟಿಯು (ಬಂಡಿಗಾಲಿ) ಪಕ್ಷದ ಕೆ.ಮಹಾಂತೇಶ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಎಂ.ಶಫಿ ಗೆಲುವು ಸಾಧಿಸಿದ್ದಾರೆ.

ಇನ್ನು ಸೆಂಟ್ರಲ್ ಶಾಫ್ಟ್‌ನಲ್ಲಿ ಹನುಮಂತಗೌಡ(ಬಂಡಿಗಾಲಿ), ಗ್ಯಾನಪ್ಪ, ವಿಲೇಜ್ ಶಾಫ್ಟ್-ಅಮರೇಶ, ಆಡಳಿತ ವಿಭಾಗ-ಕುಪ್ಪಣ್ಣ (ಆಕಳು ಪಕ್ಷ), ಬುದ್ದಿನ್ನಿ ಗಣಿಯಲ್ಲಿ ಉಮಾಪತಿ, ಊಟಿ ಗಣಿ-ಹನುಮಂತ, ಮಹಿಳಾ ವಿಭಾಗದಲ್ಲಿ ಪೆಂಚಲಮ್ಮ, ಲೋಹ ವಿಭಾಗದಲ್ಲಿ ಮುನಿರುದ್ದೀನ್, ತಾಂತ್ರಿಕ ಬಿ ಗಂಗಪ್ಪ (ತಕ್ಕಡಿ ಪಕ್ಷ) ಹಾಗೂ ತಾಂತ್ರಿಕ ಎ ವಿಭಾಗದಲ್ಲಿ ಬಂಡಿಗಾಲಿ ಚಿಹ್ನೆಯ ಗುಂಡಪ್ಪ ಗೆಲುವು ಸಾಧಿಸಿದ್ದಾರೆ. ಇನ್ನುಳಿದ ಸ್ಥಾನಗಳಿಗೆ ತಡರಾತ್ರಿವರೆಗೆ ಮತ ಎಣಿಕೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net