ನಗರದಲ್ಲಿನ ಸಮಸ್ಯೆಗಳನ್ನು ವೀಕ್ಷಿಸಿದ ಆಯುಕ್ತ ಅಶೋಕ ದುಡಗುಂಟಿ

20240720_092505.jpg
Published on

ಬೆಳಗಾವಿ: ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನಗರದಲ್ಲಿ ಸೃಷ್ಟಿಸಿರುವ ಸಮಸ್ಯೆಗಳ ಪರಿಹರಿಸಲು ಖುದ್ದಾಗಿ ಸ್ಥಳಕ್ಕೆ ಶನಿವಾರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಭೇಟಿ ನೀಡಿ ಪರಿಶೀಲಿಸದರು.

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಅಂಡರ್ ಪಾಸ್ ನಲ್ಲಿ ತುಂಬಿಕೊಂಡಿರುವ ನೀರು, ನಾನಾವಾಡಿ ರಸ್ತೆ ಮೇಲೆ ಬಿದ್ದಿರುವ ಗಿಡವನ್ನು ತೆರವುಗೊಳಿಸಲು ಸೂಚಿಸಿದರು. ನಾನಾವಾಡಿ ಪ್ರದೇಶದಲ್ಲಿರುವ ನಾಲಾಗಳನ್ನು ವೀಕ್ಷಿಸಿದರು.. ಮತ್ತು ಎಲ್ಲೂರ ರಸ್ತೆಯಲ್ಲಿರುವ ನಾಲಾಗಳನ್ನು ಪರಿಶೀಲಿಸಿ, ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಿದರು....

ಹಳೆ ಪಿ ಬಿ ರಸ್ತೆ ನರಗುಂದಕರ್ ಭಾವೆ ಚೌಕ್ ಹಾಗೂ ಪಾoಗೂಡ ಗಲ್ಲಿಗೆ ಭೇಟಿ ನೀಡಿದರು ಹಾಗೂ ರಸ್ತೆ ಗುಂಡಿಗಳನ್ನು ಕೊಡಲೇ ಸರಿಪಡಿಸಲು ಸಂಬಂಧಪಟ್ಟ ದಕ್ಷಿಣ ಹಾಗೂ ಉತ್ತರ ಕಾರ್ಯಪಾಲಕ ಅಭಿಯಂತರರಿಗೆ ತಿಳಿಸಿದರು.

ಹಳೆ ಗಾಂಧಿನಗರ್ ನ್ಯೂ ಗಾಂಧಿನಗರ ಹಾಗೂ ಅಮ್ಮನ್ ನಗರಿಗೆ ಭೇಟಿ ನೀಡಿ ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಿದರು ಹಾಗೂ ಸಂಬಂಧ ಪಟ್ಟವರಿಗೆ ನಿರ್ದೇಶನ ನೀಡಿದರು...

ತುಂಬಿದ್ದ ಚರಂಡಿಗಳನ್ನು ನೋಡಿ ಚರಂಡಿ ಸ್ವಚ್ಛತೆಗಾಗಿ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಿದರು..

ಎಲ್ಲಾ ವಾರ್ಡ್ಸ್ ಗಳಲ್ಲಿ ಮಲೇರಿಯಾ ಔಷಧಿ ಸ್ಪ್ರೇ ಹಾಗೂ ಫಾಗಿಂಗ್ ಕಡ್ಡಾಯವಾಗಿ ಪ್ರತಿದಿನ ಮಾಡಲು ಎಲ್ಲಾ ಆರೋಗ್ಯ ನಿರೀಕ್ಷಕರಿಗೆ ನಿರ್ದೇಶನ ನೀಡಿದರು.....

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net