ಕಾರ್ಯಾಗಾರದಿಂದ ಬದಲಾವಣೆ ಸಾಧ್ಯ

8manju9
Published on

ಬೆಳಗಾವಿ:ಪ್ರಸ್ತುತ ದಿನಗಳಲ್ಲಿ ವೈದ್ಯಕೀಯ ಶಿಕ್ಷಕರಿಗೆ ಪಠ್ಯಕ್ರಮಗಳ ಅನುಷ್ಠಾನ, ಬದಲಾವಣೆ ಕುರಿತು ಮೇಲಿಂದ ಮೇಲೆ ಕಾರ್ಯಾಗಾರ ಹಮ್ಮಿಕೊಂಡರೆ ಮಾತ್ರ ವೈದ್ಯಕೀಯ ಕ್ಷೇತ್ರದಲ್ಲಿ ಬದಲಾವಣೆ ತರಲು ಸಾಧ್ಯವಾಗಲಿದೆ ಎಂದು ಕೆಎಲ್‌ಇ ಸಂಸ್ಥೆಯ ಜೆಎನ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಸ್.ಮಹಾಂತಶೆಟ್ಟಿ ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ಜೆಎನ್ ವೈದ್ಯಕೀಯ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಎನ್‌ಎಂಸಿ ನೋಡಲ್ ಸೆಂಟರ್ ಫಾರ್ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂ, ಡಿಪಾರ್ಟ್‌ಮೆಂಟ್ ಆಫ್ ಮೆಡಿಕಲ್ ಎಜುಕೇಶನ್, ಜೆಎನ್ ಮೆಡಿಕಲ್ ಕಾಲೇಜ್ ಅಧ್ಯಾಪಕರಿಗೆ ‘ಪಠ್ಯಕ್ರಮ ಅನುಷ್ಠಾನ ಬೆಂಬಲ ಕಾರ್ಯಕ್ರಮ ( ಸಿಐಎಸ್‌ಪಿ-111)ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕೀಯ ಶಿಕ್ಷಕರಿಗೆ ರಾಷ್ಟ್ರೀಯ ವೈದ್ಯಕೀಯ ಮಂಡಳಿ ಆದೇಶಿಸಿರುವ ‘ಪಠ್ಯಕ್ರಮ ಅನುಷ್ಠಾನ ಬೆಂಬಲ ಕಾರ್ಯಕ್ರಮ’ (ಸಿಐಎಸ್‌ಪಿ-ಐಐಐ)ದ ಮಹತ್ವ ಎತ್ತಿ ತೋರಿಸುತ್ತದೆ ಎಂದರು.

ಬಿಸಿಎಂಇ ಸಹ-ಸಂಚಾಲಕಿ ಡಾ.ದೀಪ್ತಿ ಎಂ ಕಡೆಯಂಗಡಿ ಸ್ವಾಗತಿಸಿದರು. ಸಹ-ಸಂಚಾಲಕಿ ಡಾ.ನಯನಾ ಹಶಿಲ್ಕರ, ಸಂಚಾಲಕಿ ಡಾ.ರೂಪಾ ಎಂ ಬೆಲ್ಲದ, ಡಾ.ಭಾಗ್ಯಶ್ರೀ ಹುನಗುಂದ, ಡಾ.ಶಿಲ್ಪಾ ಭೀಮಳ್ಳಿ, ಡಾ.ಪದ್ಮಜಾ ವಾಲ್ವೇಕರ, ಡಾ.ಸುನೀತಾ ವೈ ಪಾಟೀಲ್, ಡಾ.ಜ್ಯೋತಿ ನಾಗಮೋತಿ, ಡಾ. ಜಯಶೀಲಾ ಬಾಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net