ಕ್ರಿಕೆಟ್‌ನಲ್ಲಿ ಪತ್ರಕರ್ತರಿಗೆ ಗೆಲುವು, ಕಬ್ಬಡ್ಡಿ ಜಿಪಂ ಮೇಲುಗೈ

13-klr-12
Published on

ಕೋಲಾರ: ಜಿಪಂ ಸದಸ್ಯರ ಕ್ರೀಡಾಕೂಟದ ಅಂಗವಾಗಿ ನಡೆದ ಜಿಪಂ ಸದಸ್ಯರು ಹಾಗೂ ಪತ್ರಕರ್ತರ ಸಂಘದ ನಡುವಿನ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪತ್ರಕರ್ತರ ಸಂಘ ಹಾಗೂ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಜಿಪಂ ಅಧ್ಯಕ್ಷರ ತಂಡ ಗೆಲುವು ಸಾಧಿಸಿತು.

ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಆಶ್ರಯದಲ್ಲಿ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕ್ರೀಡಾಕೂಟದಲ್ಲಿ 8 ಓವರ್‌ಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿ.ಮುನಿರಾಜು ನೇತೃತ್ವದ ಪತ್ರಕರ್ತರ ತಂಡ 89 ರನ್ ಗಳಿಸಿ ಜಯ ದಾಖಲಿಸಿದೆ.

ಜಿಪಂ ಅಧ್ಯಕ್ಷರ ನೇತೃತ್ವದ ಜಿಪಂ ಸದಸ್ಯರ ತಂಡ 35 ರನ್ ಗಳಿಸಲು ಸಾಧ್ಯವಾಗಿದ್ದು, ಸಂಘದ ಖಜಾಂಚಿ ಎ.ಜಿ.ಸುರೇಶ್‌ಕುಮಾರ್, ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಉತ್ತಮ ಪ್ರದರ್ಶನ ನೀಡಿದರು. ಎಸ್.ಕೆ.ಚಂದ್ರಶೇಖರ್, ಎ.ಜಿ.ಸುರೇಶ್‌ಕುಮಾರ್, ರಾಜೇಂದ್ರಸಿಂಹ, ಮಹೇಶ್, ರವಿಕುಮಾರ್, ಗಂಗಾಧರ್, ಶ್ರೀಹರಿ, ನವೀನ್, ರಘುರಾಜ್, ಬಂಗಾರಪೇಟೆ, ಮಂಜುನಾಥ್, ಸುರೇಶ್ ಮತ್ತಿತರರಿದ್ದರು.

ಕಬ್ಬಡ್ಡಿ ಪಂದ್ಯಾವಳಿಯಲ್ಲಿ 12 ಅಂಕಗಳೊಂದಿಗೆ ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ನೇತೃತ್ವದ ತಂಡ ಜಯ ಸಾಧಿಸಿತು. ಪತ್ರಕರ್ತರ ತಂಡ 8 ಅಂಕಗಳೊಂದಿಗೆ ಸೋಲುಂಡಿತು. ಜಿಪಂ ಸದಸ್ಯ ಚಿನ್ನಸ್ವಾಮಿರೆಡ್ಡಿ, ಮ್ಯಾಕಲ ನಾರಾಯಣಸ್ವಾಮಿ,ಅರುಣ್ ಪ್ರಸಾದ್, ಅರವಿಂದ್, ಅಂಬರೀಷ್, ಮಹೇಶ್, ನಾಗರಾಜ್ ಹಾಗೂ ಪತ್ರಕರ್ತರ ತಂಡದಲ್ಲಿ ವಿ.ಮುನಿರಾಜು, ಮದನ್, ಕೋಲಾರ್‌ನ್ಯೂಸ್ ಚಂದ್ರು, ಗಂಗಾಧರ್, ಅಂಬರೀಷ್, ಗಂಗರಾಜ್, ಶ್ರೀಕಾಂತ್, ಶ್ರೀಹರಿ ಮತ್ತಿತರರು ಉತ್ತಮ ಪ್ರದರ್ಶನ ನೀಡಿದರು.

ಪತ್ರಕರ್ತರಾದ ಅನಂತರಾಮ್, ಕೋ.ನಾ.ಮಂಜುನಾಥ್, ಸಚ್ಚಿದಾನಂದ, ಸಿ.ಜಿ.ಮುರಳಿ, ಸಿ.ವಿ.ನಾಗರಾಜ್ ಮತ್ತಿತರರಿದ್ದರು. ಕ್ರೀಡಾಕೂಟಕ್ಕೆ ಡಿಸಿ ಡಾ.ಆರ್.ಸೆಲ್ವಮಣಿ, ಜಿಪಂ ಸಿಇಒ ಎನ್.ಎಂ. ನಾಗರಾಜ್, ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಪಾರಿವಾಳ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್.ಮಂಜುನಾಥ್, ಜಿಪಂ ಉಪಾಧ್ಯಕ್ಷೆ ಯಶೋಧ ಕೃಷ್ಣಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅರುಣ್ ಪ್ರಸಾದ್, ನಿರ್ಮಲಾ ಅಂಬರೀಷ್, ಚಿನ್ನಸ್ವಾಮಿಗೌಡ, ಸದಸ್ಯರಾದ ತೂಪಲ್ಲಿ ನಾರಾಯಣಸ್ವಾಮಿ, ಮುನಿಲಕ್ಷ್ಮಮ್ಮ, ಕೆ.ಎಸ್.ನಂಜುಂಡಪ್ಪ, ಪಾರ್ವತಮ್ಮ, ಮ್ಯಾಕಲ ನಾರಾಯಣಸ್ವಾಮಿ, ನಾಗಮಣಿ ಮತ್ತಿತರರಿದ್ದರು.

ವಿಜೇತರ ವಿವರ: ಷೆಟಲ್‌ನಲ್ಲಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಸದಸ್ಯ ನಾರಾಯಣಸ್ವಾಮಿ (ಪ್ರಥಮ), ಸದಸ್ಯರಾದ ಮಹೇಶ್, ಅರವಿಂದ್ (ದ್ವಿತೀಯ), ಪುರುಷರ ವಿಭಾಗದ ಗುಂಡು ಎಸೆತದಲ್ಲಿ ಚಿನ್ನಸ್ವಾಮಿಗೌಡ (ಪ್ರ), ಅರವಿಂದ ಕುಮಾರ್ (ದ್ವಿ), ಅರುಣ್ ಪ್ರಸಾದ್ (ತೃ), ವೇಗ ನಡಿಗೆಯಲ್ಲಿ ಸಿ.ಎಸ್.ವೆಂಕಟೇಶ್ (ಪ್ರ), ನಾರಾಯಣಸ್ವಾಮಿ (ದ್ವಿ), ಅರವಿಂದ (ತೃ)ಸ್ಥಾನ ಪಡೆದರು. ಹಗ್ಗಜಗ್ಗಾಟದಲ್ಲಿ ಮಹೇಶ್ ತಂಡ ಪ್ರಥಮ, ಸಿ.ಎಸ್.ವೆಂಕಟೇಶ್ ತಂಡ ದ್ವಿತೀಯ ಸ್ಥಾನ ಪಡೆಯಿತು.

ಮಹಿಳೆಯರ ವಿಭಾಗ: ಗುಂಡು ಎಸೆತ-ನಿರ್ಮಲಾ ವೆಂಕಟೇಶ್ (ಪ್ರ), ಯಶೋಧಮ್ಮ (ದ್ವಿ),ನಾಗಮಣಿ (ತೃ), ನಿಂಬೆ ಹಣ್ಣು, ಚಮಚ ಹಾಗೂ ವೇಗ ನಡಿಗೆ-ನಿರ್ಮಲಾ, ನಾಗಮಣಿ, ಮುನಿಲಕ್ಷ್ಮಮ್ಮ ಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದರು. ಮಡಿಕೆ ಒಡೆಯುವ ಸ್ಪರ್ಧೆ-ನಾಗಮಣಿ, ನಿರ್ಮಲಾ, ಪಾರ್ವತಮ್ಮ, ಮ್ಯೂಸಿಕಲ್ ಚೇರ್ ಸ್ವರ್ಧೆಯಲ್ಲಿ ನಿರ್ಮಲಾ, ಪಾರ್ವತಮ್ಮ, ಮುನಿಲಕ್ಷ್ಮಮ್ಮ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net