ಏ.14ರಂದು ಶ್ರೀಮಂತ ಸಿನಿಮಾ ತೆರೆಗೆ: ಸಹಾಯಕ ನಿರ್ದೇಶಕ ಶಿವರಾಜ್ ದಳವಾಯಿ ಮಾಹಿತಿ

IMG-20230406-WA0006
Published on

ಮಂಡ್ಯ: ರೈತರನ್ನು ಕೇಂದ್ರೀಕರಿಸಿ ನಿರ್ಮಿಸಿರುವ ಶ್ರೀಮಂತ ಸಿನಿಮಾ ಏ.14ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ಸಹಾಯಕ ನಿರ್ದೇಶಕ ಶಿವರಾಜ್ ದಳವಾಯಿ ತಿಳಿಸಿದರು.

ರಿಯಲ್ ಹೀರೋ ಎನ್ನಿಸಿಕೊಂಡಿರುವ ಸೋನುಸೂದ್ ಅವರು ಶ್ರೀಮಂತ ಚಿತ್ರದ ಮೂಲಕ ಕನ್ನಡ ಭಾಷೆಯ ಸಿನಿಮಾದಲ್ಲಿ ಪ್ರಥಮ ಬಾರಿಗೆ ನಾಯಕ ನಟರಾಗಿ ನಟಿಸಿದ್ದಾರೆ. ಹಾಸನ್ ರಮೇಶ್ ಅವರು ಸಿನಿಮಾದ ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ. ನಾದಬ್ರಹ್ಮ ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತವಿದೆ. ಡಾ.ಎಸ್.ಪಿ.ಬಾಲಸುಬ್ರಮಣ್ಯ ಅವರು ಗಾಯನವಿದೆ. ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸಿನಿಮಾದ ಚಿತ್ರೀಕರಣ ನಡೆದಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

100ಕ್ಕೂ ಹೆಚ್ಚು ರಂಗಭೂಮಿ ಕಲಾವಿದರು ಹಾಗೂ 100ಕ್ಕೂ ಹೆಚ್ಚು ರೈತರು ಅಭಿನಯಿಸಿರುವುದು ಸಿನಿಮಾದ ವಿಶೇಷತೆ. ಕೊಡುಗೈ ದಾನಿ ರೈತರೇ ನಿಜವಾದ ಶ್ರೀಮಂತ ಎಂದು ಜಗತ್ತಿಗೆ ಸಾರುವ ಸಿನಿಮಾ ಇದಾಗಿದೆ. ಮರೆಯಾಗುತ್ತಿರುವ ಹಳ್ಳಿಯ ಸುಗ್ಗಿ ಸಂಭ್ರಮ, ಜಾತ್ರೆ, ಹಬ್ಬ, ಹಾಡು, ಹಳ್ಳಿ ಆಟಗಳು, ಗ್ರಾಮೀಣ ಕಲೆಗಳ ಸಂಭ್ರಮವನ್ನು ಈ ಸಿನಿಮಾದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.ಹಿರಿಯ ಕಲಾವಿದರಾದ ರಮೇಶ್‌ಭಟ್, ರವಿಶಂಕರ್‌ಗೌಡ, ಸಾಧುಕೋಕಿಲ, ಚರಣ್‌ರಾಜ್, ಕಲ್ಯಾಣಿ, ಗಿರಿ, ರಾಜು ತಾಳಿಕೋಟೆ, ಕುರಿಬಾಂಡ್ ರಂಗ, ಬಸವರಾಜ್ ಹಾಸನ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ ಎಂದು ವಿವರಿಸಿದರು.

ನಟ ವಾಲ್ನಟ್ ಮಹೇಶ್, ರೈತಮುಖಂಡ ಹೆಮ್ಮಿಗೆ ಚಂದ್ರಶೇಖರ್, ಗುರುಗೌಡ, ರುಕ್ಮಾಂಗದ, ಸತೀಶ್ ಪಟೇಲ್, ರಾಕೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net