ಮಾರಿಯಮ್ಮನ ಅನುಗ್ರಹವೇ ನನಗೆ ಶ್ರೀರಕ್ಷೆ: ಕಾಪು ಹೊಸ ಮಾರಿಗುಡಿಗೆ ಭೇಟಿ ನೀಡಿ ಸಿನಿ ಶೆಟ್ಟಿ ಹೇಳಿಕೆ

pdb_20 july cini shetty
Published on


ಪಡುಬಿದ್ರಿ: ಮಿಸ್ ಇಂಡಿಯಾ ಸಿನಿ ಶೆಟ್ಟಿ ಅವರು ಮಂಗಳವಾರ ರಾತ್ರಿ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಕಾಪು ಮಾರಿಯಮ್ಮ ದೇವಿಯ ಭಕ್ತೆಯಾಗಿರುವ ಸಿನಿ ಶೆಟ್ಟಿ ಅವರು ಮಿಸ್ ಇಂಡಿಯಾ ಪ್ರಶಸ್ತಿ ವಿಜೇತರಾದ ಬಳಿಕ ಪ್ರಥಮ ಬಾರಿಗೆ ಕಾಪು ಹೊಸ ಮಾರಿಗುಡಿಗೆ ಭೇಟಿ ನೀಡಿದ್ದು ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ದೇವಸ್ಥಾನದ ವತಿಯಿಂದ ಅರ್ಚಕ ಶ್ರೀಧರ ತಂತ್ರಿ ಮೂಲಕ ಪ್ರಸಾದ ನೀಡಿ ಗೌರವಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ಅವರು, ತಾನು ಮಾರಿಯಮ್ಮ ದೇವಿಯ ಭಕ್ತೆಯಾಗಿದ್ದು ಎಳೆವೆಯಿಂದಲೂ ತಂದೆ, ತಾಯಿಯೊಂದಿಗೆ ಇಲ್ಲಿಗೆ ಬರುತ್ತಿದ್ದೆ. ಈಗ ಮಿಸ್ ಇಂಡಿಯಾಗಿ ಆಗಿ ಬರುತ್ತಿರುವದಕ್ಕೆ ಮಾರಿಯಮ್ಮ ದೇವಿಯ ಅನುಗ್ರಹವೇ ಮುಖ್ಯ ಕಾರಣವಾಗಿದೆ. ಮುಂದೆ ಅಮ್ಮನ ಅನುಗ್ರಹದಿಂದ ಮಿಸ್ ವರ್ಲ್ಡ್ ಆಗಿಯೂ ಬರುವಂತಾಗಲಿ ಎಂದು ಪ್ರಾರ್ಥನೆಯನ್ನು ದೇವರ ಮುಂದಿಟ್ಟಿದ್ದೇನೆ ಎಂದರು.
ಪ್ರಸ್ತುತ ಕಾಪು ಹೊಸ ಮಾರಿಗುಡಿ ಜೀರ್ಣೋದ್ಧಾರಗೊಳ್ಳುತ್ತಿದ್ದು ಜೀರ್ಣೋದ್ಧಾರಕ್ಕೆ ತಮ್ಮ ಮನೆಯ ವತಿಯಿಂದ 99 ಶಿಲಾ ಸೇವೆ ನೀಡುತ್ತಿದ್ದೇವೆ. ಇದೇ ರೀತಿಯಲ್ಲಿ ಜಗದಗಲಕ್ಕೆ ಹರಡಿರುವ ಮಾರಿಯಮ್ಮ ದೇವಿಯ ಭಕ್ತರೆಲ್ಲರೂ ಶಿಲಾ ಸೇವೆ ನೀಡುವ ಮೂಲಕ ಮಾರಿಗುಡಿಯ ಜೀರ್ಣೋದ್ಧಾರದಲ್ಲಿ ಕೈಜೋಡಿಸುವಂತೆ ಮನವಿ ಮಾಡಿದರು.

ಸಿನಿ ಶೆಟ್ಟಿ ತಂದೆ ಸದಾನಂದ ಶೆಟ್ಟಿ ಮಾತನಾಡಿ, ಮಿಸ್ ಇಂಡಿಯಾ ಸ್ಪರ್ಧೆಗೆ ಹೋಗುವ ಮುನ್ನ ಮಾರಿಗುಡಿಗೆ ಬಂದು ಹೋಗಿದ್ದು, ಸ್ಪರ್ಧೆಯಲ್ಲಿ ಗೆದ್ದು ಬಂದ ಕಾರಣ ಮಾರಿಪೂಜೆ ಸೇವೆ ಹರಕೆ ಹೊತ್ತಿದ್ದು, ಮುಂದಿನ ಮಿಸ್‌ವರ್ಲ್ಡ್ ಸ್ಪರ್ಧೆಯಲ್ಲೂ ಗೆದ್ದು ಬರುವಂತಾಗಲು ಎಲ್ಲರ ಆಶೀರ್ವಾದ ಸಿಗುವಂತಾಗಲಿ ಎಂದು ಆಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net