

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ ಬಾಗಿಲು ಮುಚ್ಚಿದ್ದ ಸಿಂಗಲ್ ಸ್ಕ್ರೀನ್ ಸಿನಿಮಾಮಂದಿರ ಶುಕ್ರವಾರ ಬಾಗಿಲು ತೆರೆದು ಪ್ರದರ್ಶನ ಆರಂಭಿಸಿದೆ.
ಲಾಕ್‌ಡೌನ್ ತೆರವಾಗಿ, ಚಿತ್ರ ಮಂದಿರ ತೆರೆಯಲು ಸರ್ಕಾರ ಅವಕಾಶ ನೀಡಿದ್ದರೂ, ಈ ಸಿನಿಮಾಮಂದಿರಗಳು ಇದುವರೆಗೆ ಬಾಗಿಲು ತೆರೆದಿರಲಿಲ್ಲ. ಬಿಡುಗಡೆ ಇಲ್ಲದ ಸಿನಿಮಗಳು. ಪ್ರೇಕ್ಷಕರ ಕೊರತೆಯ ಆತಂಕದಿಂದ ಸಿನಿಮ ಮಂದಿರ ತೆರೆಯುವ ನಿರ್ಧಾರದಿಂದ ದೂರ ಉಳಿದಿದ್ದರು. ಪ್ರಸಕ್ತ ಉಡುಪಿ ಕುಕ್ಕಿಕಟ್ಟೆಯಲ್ಲಿರುವ ಡಯಾನ ಚಿತ್ರಮಂದಿರ ಸಿನಿಮಾ ಪ್ರದರ್ಶನ ಆರಂಭಿಸಿದೆ. ಶುಕ್ರವಾರ ಆಕ್ಟ್-1978 ಕನ್ನಡ ಸಿನಿಮಾ ಪ್ರದರ್ಶನ ಆರಂಭಗೊಂಡಿದೆ. ಚಿತ್ರಮಂದಿರ ಸ್ಯಾನಿಟೈಸ್‌ಗೊಳಿಸಲಾಗಿದ್ದು, ಥರ್ಮಲ್ ಸ್ಕಾೃನಿಂಗ್‌ಗೊಳಪಡಿಸಿ ಪ್ರೇಕ್ಷಕರನ್ನು ಒಳಗೆ ಬಿಡಲಾಗುತ್ತದೆ. ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಲಾಗುತ್ತಿದೆ. ಸದ್ಯ ಪ್ರೇಕ್ಷಕರ ಕೊರತೆಯಿಂದ ಬೆಳಗ್ಗೆ ಪ್ರದರ್ಶನವಿಲ್ಲ. ಮಧ್ಯಾಹ್ನ , ಸಾಯಂಕಾಲ, ರಾತ್ರಿ ಪ್ರದರ್ಶನ ಮಾತ್ರವಿದೆ. ಮೊದಲ ದಿನವಾದ್ದರಿಂದ ಪ್ರೇಕ್ಷಕರ ಸಂಖ್ಯೆ ಕಡಿಮೆ ಇದೆ ಎಂದು ಡಯಾನ ಚಿತ್ರಮಂದಿರ ವ್ಯವಸ್ಥಾಪಕರು ವಿಜಯವಾಣಿಗೆ ತಿಳಿಸಿದ್ದಾರೆ. ಇನ್ನುಳಿದ ಸಿಂಗಲ್‌ಸ್ಕ್ರೀನ್ ಚಿತ್ರಮಂದಿರಗಳಾದ ಕಲ್ಪನ, ಅಲಂಕಾರ್, ಆಶೀರ್ವಾದ್ ಚಿತ್ರಮಂದಿರಗಳು ಮುಂದಿನ ವಾರದಿಂದ ಪ್ರದರ್ಶನ ಆರಂಭಿಸುವ ಸಾಧ್ಯತೆ ಇದೆ.