Cinema ಶಿರೂರು ದುರ್ಘಟನೆ, ಕೇರಳದ ಅರ್ಜುನ್‌ ಪತ್ತೆಯ 72 ದಿನದ ಕಾರ್ಯಾಚರಣೆಯ ಚಲನ ಚಿತ್ರ ನಿರ್ಮಾಣ

Shirur arjun Cinema
Published on

ಕಾರವಾರ/Cinema: ಶಿರೂರು ಗುಡ್ಡ ಕುಸಿತ ಪ್ರಕರಣ, ದುರ್ಘಟನೆಯಲ್ಲಿ ನಾಪತ್ತೆಯಾಗಿದ್ದ ಅರ್ಜುನ್ ಎಂಬ ಕೇರಳದ ಚಾಲಕನ ಹುಡುಕಾಟ ಪ್ರಕರಣ ಮಲೆಯಾಳಂನಲ್ಲಿ ಸಿನಿಮಾ ಆಗಲಿದೆ. ಶಿರೂರು ಇಡೀ ಕಾರ್ಯಾಚರಣೆಯ ಸಂದರ್ಭದಲ್ಲಿ ಇಲ್ಲಿಯೇ ಇದ್ದ ಕೇರಳ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅವರು ಈ ಸಂಬಂಧ ಪುಸ್ತಕವೊಂದನ್ನು ಬರೆಯಲು ಸಿದ್ಧ ಮಾಡಿಕೊಂಡಿದ್ದು, ಮುಂದಿನ ಹಂತದಲ್ಲಿ ಅದನ್ನು ಸಿನಿಮಾ (Cinema) ಮಾಡಲಾಗುವುದು ಎಂದು ತಿಳಿಸಿದ್ದಾರೆ. ಅಂಕೋಲಾ ಶಿರೂರು ಭಾಗದಲ್ಲಿ ಅವರು ಮಂಗಳವಾರ ಸಂಚಾರ ನಡೆಸಿ ಒಂದಿಷ್ಟು ಮಾಹಿತಿಗಳನ್ನು ಕಲೆ ಹಾಕಿದರು. ನಂತರ ಕಾರವಾರದಲ್ಲಿ ಮಾಧ್ಯಮ ಪ್ರತಿನಿಽಗಳ ಜತೆ ಅವರು ಮಾತನಾಡಿದರು. `ಅರ್ಜುನ್ ಹುಡುಕಾಟ ಪ್ರಕರಣವನ್ನು ನೀವು ಸಂಪೂರ್ಣವಾಗಿ ಅಲ್ಲಿಯೇ ಇದ್ದು, ಗಮನಿಸಿದ್ದೀರಿ. ಒಂದು ಪುಸ್ತಕವನ್ನೇಕೆ ಬರೆಯಬಾರದು ಎಂದು ನಮ್ಮ ಅಸೆಂಬ್ಲಿ ಸ್ಪೀಕರ್ ಎ.ಎನ್.ಶಾಂಸೀರ್ ಅವರು ಸಲಹೆ ನೀಡಿದರು. ಅದಕ್ಕೆ ಒಪ್ಪಿಕೊಂಡು ನಾನು ಅದಕ್ಕೆ ಸಿದ್ಧತೆ ನಡೆಸಿದ್ದೇನೆ' ಎಂದರು. ಸಿನೆಮಾ ಕುರಿತು ಮಾತನಾಡಿದ ಅವರು `ನಾನು ಮೊದಲು ಪುಸ್ತಕ ಬರೆಯುತ್ತೇನೆ. ನಮ್ಮ ಮಲೆಯಾಳಂನಲ್ಲಿ ನಿಜ ಘಟನೆ ಆಧಾರಿತ ಸಿನಿಮಾ(Cinema)ಗಳು ಬರುವುದು ಹೆಚ್ಚು. ಅದೇ ರೀತಿ ಅರ್ಜುನ್ ಹುಡುಕಾಟ ಕಾರ್ಯಾಚರಣೆಯನ್ನೂ ಮುಂದೆ ಸಿನಿಮಾ ಮಾಡುವ ಚರ್ಚೆ ಇದ್ದು, ಆ ಬಗ್ಗೆ ಇನ್ನಷ್ಟು ವಿಚಾರ ಮುಂದೆ ನಿರ್ಧಾರವಾಗಬೇಕಿದೆ' ಎಂದರು.

ಘಟನೆ ನೆನಪು

ಜುಲೈ 16 ರಂದು ಅಂಕೋಲಾ ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು . ಅದರಲ್ಲಿ 11 ಜನ ನಾಪತ್ತೆಯಾಗಿದ್ದರು. 7 ಜನ ಸ್ಥಳೀಯರಾಗಿದ್ದರೆ. ಮೂವರು ತಮಿಳುನಾಡು ಮೂಲದ ಟ್ಯಾಂಕರ್ ಚಾಲಕರಾಗಿದ್ದರು. ಒಬ್ಬ ಕೇರಳ ಮೂಲದ ಚಾಲಕ ಅರ್ಜುನ್ ಆಗಿದ್ದರು. ಭಾರತ ಬೆಂಜ್ ಲಾರಿಯಲ್ಲಿ ಅವರು ಜೊಯಿಡಾದಿಂದ ಕೇರಳಕ್ಕೆ ಅಕೇಶಿಯಾ ಕಟ್ಟಿಗೆ ಸಾಗಿಸುತ್ತಿದ್ದರು. ಸತತ 72 ದಿನಗಳ ಕಾರ್ಯಾಚರಣೆಯ ಬಳಿಕ ಗಂಗಾವಳಿ ನದಿಯ ಆಳದಿಂದ ಅರ್ಜುನ್ ಲಾರಿಯನ್ನು ಹೊರ ತೆಗೆಯಲಾಗಿತ್ತು. ಅದರಲ್ಲೇ ಅರ್ಜುನ್ ಶವ ಕೊಳೆತ ಸ್ಥಿತಿಯಲ್ಲಿತ್ತು. ಅರ್ಜುನ್ ಶವ ತೆಗೆಯಲು ಜಿಲ್ಲಾಡಳಿತ ವಿಳಂಬ ಮಾಡುತ್ತಿದೆ ಎಂದು ಲಾರಿ ಮಾಲೀಕರು ಗಲಾಟೆ ಮಾಡಿದ್ದರು. ಹೈಕೋರ್ಟ್ನಲ್ಲಿ ಈ ಸಂಬAಧ ರಿಟ್ ಪಿಟೀಶನ್ ಸಲ್ಲಿಕೆಯಾಗಿತ್ತು.

ಏಕೆ Cinema..?

ಕೇರಳ ವಯನಾಡಿನಲ್ಲಿ ಜುಲೈ 30 ರಂದು ಭಾರಿ ಪ್ರಮಾಣದ ಗುಡ್ಡ ಕುಸಿತ ಉಂಟಾಯಿತು. 254 ಜನ ಮೃತಪಟ್ಟರು. 397 ಜನ ಗಾಯಗೊಂಡರು. 118 ಜನರ ದೇಹವೇ ಪತ್ತೆಯಾಗಿಲ್ಲ. ಆದರೆ, ಆ ವಿಷಯದ ಬಗ್ಗೆ ಚರ್ಚಿಸದ ಕೇರಳ ಮಾಧ್ಯಮಗಳು ಒಬ್ಬ ಅರ್ಜುನ್ ವಿಷಯವನ್ನು ಏಕಿಷ್ಟು ದೊಡ್ಡದು ಮಾಡುತ್ತಿವೆ ಎಂಬುದು ಎಲ್ಲರಲ್ಲಿ ಮೂಡುವ ಪ್ರಶ್ನೆ.

ಶಿರೂರು ಗುಡ್ಡ ಕುಸಿತ ಸಂಭವಿಸಿದಾಗ ಅರ್ಜುನ್ ಲಾರಿಯೊಳಗೆ ಬದುಕಿದ್ದಾರೆ. ಅವರ ಮೊಬೈಲ್ ನಂಬರ್‌ನಿAದ ಮನೆಯವರಿಗೆ ಕರೆ ಬಂದಿತ್ತು ಎಂಬ ಸುದ್ದಿ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಕೇರಳದ 20 ಕ್ಕೂ ಅಽಕ ಮಾಧ್ಯಮ ವರದಿಗಾರರು ಕ್ಯಾಮರಾಮನ್‌ಗಳು 20 ಕ್ಕೂ ಹಚ್ಚು ದಿನ ಅಂಕೋಲಾ ಶಿರೂರಿನಲ್ಲಿ ಬೀಡು ಬಿಟ್ಟಿದ್ದರು. ಕಾರ್ಯಾಚರಣೆಯ ಲೈವ್ ಕವರೇಜ್ ಮಾಡಿದ್ದರು. ಇದು ಕೇರಳದ ಜನರಲ್ಲಿ ಅರ್ಜುನ್ ಅವರ ಬಗ್ಗೆ ವಿಶೇಷ ಕಾಳಜಿ ಹುಟ್ಟಲು ಕಾರಣವಾಯಿತು. ಅರ್ಜುನ್ ಮೊಬೈಲ್ ಜು.16 ರಂದೇ ಸ್ವಿಚ್ ಆಫ್ ಆಗಿತ್ತು ಎಂಬ ವಿಚಾರ ನಂತರ ತಿಳಿಯಿತಾದರೂ ವಿಚಾರ ಕೇರಳದಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು. ಈಗಲೇ ರಾಷ್ಟ್ರೀಯ  ಹೆದ್ದಾರಿ 66 ರಲ್ಲಿ ಓಡಾಡುವ ಹಲವು ಕೇರಳಿಗರು ಶಿರೂರಿನಲ್ಲಿ ಬಂದು ನಿಂತು ಸ್ಥಳವನ್ನು ನೋಡಿ ಹೋಗುತ್ತಾರೆ.

ಇದನ್ನೂ ಓದಿ:https://www.vijayavani.net/rood-safetymeetingಶಿರೂರು ನೆನಪು: https://www.youtube.com/watch?v=IrwiHSFKSgo

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net