ಯಂಗ್ ಇಂಡಿಯನ್ಸ್ ಪಾರ್ಲಿಮೆಂಟ್

Published on

ಹುಬ್ಬಳ್ಳಿ: ಕಾನ್ಫಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಯಂಗ್ ಇಂಡಿಯನ್ಸ್ (ವೈಐ) ಹುಬ್ಬಳ್ಳಿ ಶಾಖೆ ವತಿಯಿಂದ ಯಂಗ್ ಇಂಡಿಯನ್ಸ್ ಪಾರ್ಲಿಮೆಂಟ್ 2.0 ಅನ್ನು ಜುಲೈ 4ರಿಂದ ಎರಡು ದಿನಗಳವರೆಗೆ ಇಲ್ಲಿಯ ಹೆಬಸೂರ ಭವನದಲ್ಲಿ ಏರ್ಪಡಿಸಲಾಗಿದೆ.

ಹೈಸ್ಕೂಲ್ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವುದು, ನಾಗರಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕಲ್ಪಿತ ಸಂಸತ್ ಮಾದರಿಯಲ್ಲಿ ವಾಸ್ತವ ಜಗತ್ತಿನ ವಿಷಯಗಳನ್ನು ಚರ್ಚಿಸಲಾಗುತ್ತಿದೆ.

ಸೊಷಿಯಲ್ ಮೀಡಿಯಾ ರೆಗುಲೇಷನ್ ಹಾಗೂ ಇಟ್ಸ್ ಇಂಪ್ಯಾಕ್ಟ್ ಆನ್ ಫ್ರೀಡಂ ಆಫ್ ಸ್ಪೀಚ್' ವಿಷಯ ಕುರಿತು ಸಂವಾದ ನಡೆಯಲಿದೆ.
ಖಾಸಗಿ, ಸರ್ಕಾರಿ ಶಾಲೆಗಳ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಜವಾಬ್ದಾರಿಯುತ ನಾಗರಿಕರನ್ನು ನಿರ್ಮಿಸುವುದು ಇದರ ಪ್ರಮುಖ ಉದ್ದೇಶ ಹೊಂದಲಾಗಿದೆ ಎಂದು ಡಾ. ಸಮೀರ ಬೆಳವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net