ಸಿಗರೇಟ್ ಹಣ ಕೇಳಿದ್ದಕ್ಕೆ ಕಾಂಡಿಮೆಂಟ್ಸ್ ಮಾಲೀಕನ ಮೇಲೆ ಹಲ್ಲೆ: ನಾಲ್ವರು ಕಿಡಿಗೇಡಿಗಳ ಬಂಧನ

Puttenahalli
Published on

ಬೆಂಗಳೂರು: ಸಿಗರೇಟ್ ಹಣ ಕೇಳಿದ್ದಕ್ಕೆ ಕಾಂಡಿಮೆಂಟ್ಸ್ ಮಾಲೀಕನ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ ಮಾಡಿದ್ದ ನಾಲ್ವರು ಕಿಡಿಗೇಡಿಗಳನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪುಟ್ಟೇನಹಳ್ಳಿಯ 14ನೇ ಮುಖ್ಯರಸ್ತೆಯ ನಿವಾಸಿ ‘ಮಂಜುನಾಥ್ ಕಾಂಡಿಮೆಂಟ್ಸ್’ ಮಾಲೀಕ ಮಂಜುನಾಥ್ ಶೆಟ್ಟಿ ಹಲ್ಲೆಗೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅವರು ಮನೆಗೆ ಮರಳಿದ್ದಾರೆ. ಹಲ್ಲೆ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಆಧರಿಸಿ ನಾಲ್ವರನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರಿನ ಮಂಜುನಾಥ್ ಅವರು, ಪುಟ್ಟೇನಹಳ್ಳಿಯಲ್ಲಿ ಕಾಡಿಮೆಂಟ್ಸ್ ನಡೆಸುತ್ತಿದ್ದು, ಸೋಮವಾರ ಮಧ್ಯಾಹ್ನ ಬಂದಿದ್ದ ಆರೋಪಿಗಳು, ಏಕಾಏಕಿ ಬಂಡಲ್‌ಗೆ ಕೈ ಹಾಕಿ ಸಿಗರೇಟ್ ತೆಗೆದುಕೊಂಡಿದ್ದಾರೆ. ಇದಕ್ಕೆ ಆಕ್ಷೇಪಿಸಿ ಹಣ ನೀಡುವಂತೆ ಆರೋಪಿಗಳಿಗೆ ಮಾಲೀಕ ಸೂಚಿಸಿದ್ದಾನೆ. ಈ ಮಾತಿಗೆ ಕೆರಳಿದ ದುಷ್ಕರ್ಮಿಗಳು, ಮಾಲೀಕನ ಮೇಲೆ ಗೂಂಡಾಗಿರಿ ಮಾಡಿದ್ದಾರೆ. ಈ ಘಟನೆ ಸಂಬಂಧ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು, ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net